Home Kundapura News ಮೀನುಗಾರಿಕೆ ವೇಳೆ ಎದೆನೋವು ಕಾಣಿಸಿಕೊಂಡು ಮೀನುಗಾರ ಸಾವು…!

ಮೀನುಗಾರಿಕೆ ವೇಳೆ ಎದೆನೋವು ಕಾಣಿಸಿಕೊಂಡು ಮೀನುಗಾರ ಸಾವು…!

ಕುಂದಾಪುರ: ಮೀನುಗಾರಿಕೆ ವೇಳೆ ಎದೆನೋವು ಕಾಣಿಸಿಕೊಂಡು ಮೀನುಗಾರ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ನಿವಾಸಿ ಜಗನ್ನಾಥ ಖಾರ್ವಿ(43) ಮೃತಪಟ್ಟವರು.

ಶ್ರೀಗಣಮಣಿಪ್ರಸಾದ್ ನಾಡದೋಣಿಯಲ್ಲಿ ಕೆಲಸ ಮಾಡಿ ಕೊಂಡಿರುವ ಅವರು ಶುಕ್ರವಾರ ಗಂಗೊಳ್ಳಿ ದಾಕು ಹಿತ್ಲುವಿನಿಂದ 5 ಮಾರು ದೂರ ಅರಬ್ಬಿ ಸಮುದ್ರಕ್ಕೆ ಸಾಗಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು.