Home Crime ಹಿರಿಯಡ್ಕ : ಅಕ್ರಮ ಮರಳು ಸಾಗಾಟ : ಪ್ರಕರಣ ದಾಖಲು….!!

ಹಿರಿಯಡ್ಕ : ಅಕ್ರಮ ಮರಳು ಸಾಗಾಟ : ಪ್ರಕರಣ ದಾಖಲು….!!

ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ‌ ಸಮೀಪದ ಅತ್ರಾಡಿ ಗ್ರಾಮ ಪರೀಕ ಸ್ವರ್ಣ ನದಿಯಲ್ಲಿ ಅಕ್ರಮವಾಗಿ ದೋಣಿಯಲ್ಲಿ ಮರಳು ತುಂಬಿಕೊಂಡು ದಡಕ್ಕೆ ಬರುತ್ತಿರುವಾಗ ಜನವರಿ 24ರಂದು ತಿಮ್ಮೇಶ ಪಿಎಸ್‌ಐ ಮಣಿಪಾಲ ರವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದು ದೋಣಿಯಲ್ಲಿ ಇದ್ದವರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿದಲ್ಲಿ ನದಿಯಿಂದ 500 ಮೀಟರ್‌ ಅಂತರದಲ್ಲಿರುವ ಪ್ರಕಾಶ ಶೆಟ್ಟಿ ಎಂಬವರ ಮನೆಯ ಅಂಗಳದಲ್ಲಿ 6 ಟಿಪ್ಪರ್‌ ಲೋಡಗಳಷ್ಟು ಮರಳನ್ನು ಸಂಗ್ರಹಿಸಿದಲ್ಲದೇ ದೋಣಿಯಲ್ಲಿ ಸುಮಾರು 3 ಯುನಿಟ್‌ ಮರಳಿರುವುದು ಕಂಡು ಬಂದಿದೆ. ಹೀಗೆ ಒಟ್ಟು 21 ಯುನಿಟ್‌ ಮರಳಿದ್ದು 42.000/-ರೂ ಅದರ ಮೌಲ್ಯದಾಗಿದ್ದು ದೋಣಿಯ ಬೆಲೆ 3.00.000 ರೂಪಾಯಿ ಆಗಬಹುದು.

ಸದರಿ ಮರಳನ್ನು ರತ್ನಾಕರ ಶೆಟ್ಟಿ ಪರೀಕರವರು ಇತರೆ ಆರೋಪಿತರೊಂದಿಗೆ ಸೇರಿ ಸಂಗ್ರಹಿಸಿರುವುದಾಗಿರುತ್ತದೆ.

ಈ ಕುರಿತು ರತ್ನಾಕರ ಶೆಟ್ಟಿ, ಪ್ರಸಾದ್‌ ಹಾಗೂ ಇತರರ ವಿರುದ್ದ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.