ಉಡುಪಿ: ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ ನಡೆಯಲಿದೆ. ಗ್ರಹಣ ದಿನ ಕೃಷ್ಣಮಠದಲ್ಲಿ ಏನೇನು ಆಚರಣೆ ಇರುತ್ತದೆ ಎಂಬ ಬಗ್ಗೆ ದಿವಾಣರಾದ ಡಾ. ಉದಯ ಸರಳತ್ತಾಯರು ಮಾಹಿತಿ ನೀಡಿದ್ದಾರೆ.
ಮಾರ್ಚ್ 3 ರಂದು ಮಂಗಳವಾರ ಗ್ರಸ್ತೋದಯ ಚಂದ್ರಗ್ರಹಣ ನಡೆಯುತ್ತದೆ. ನಮ್ಮ ಭಾಗದಲ್ಲಿ ಸೂರ್ಯಾಸ್ತ ಸಮಯ 6:19 – 6:47 ಈ ವೇಳೆಗೆ ಮಾತ್ರ ಗ್ರಹಣ ಗೋಚರ ಆಗಲಿದೆ. ಕೇವಲ ಎಂಟು ನಿಮಿಷ ಮಾತ್ರ ಗೋಚರವಾಗಲಿದೆ ಎಂದು ತಿಳಿಸಿದ್ದಾರೆ.
ಏಕಾದಶಿಯಂತೆ ಕೃಷ್ಣಮಠದಲ್ಲಿ ಆಹಾರ ಸ್ವೀಕಾರ ಇಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟ ಇರಲ್ಲ. ರಾತ್ರಿ 7 ಗಂಟಗೆ ಸ್ನಾನ ಪೂರೈಸಿ ರಾತ್ರಿ ಪೂಜೆ ನಡೆಯುತ್ತೆ. ಗ್ರಹಣ ಕಾಲದಲ್ಲೂ ಕೃಷ್ಣಮಠ ತೆರೆದಿರುತ್ತೆ. ಗ್ರಹಣದ ದಿನವೇ ಹೋಳಿ ಹುಣ್ಣಿಮೆ. ಸಾಯಂಕಾಲ ಹೋಳಿ ಪ್ರಯುಕ್ತ ಮೆರವಣಿಗೆ ಇರುತ್ತದೆ ಎಂದು ಹೇಳಿದ್ದಾರೆ.
ಕಡಿಯಾಳಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ಮರುದಿನ ಎಂದಿನಂತೆ ಮಧ್ಯಾಹ್ನ ಮಹಾಪೂಜೆ ಅನ್ನದಾನ ಇರುತ್ತದೆ. ಗ್ರಹಣ ಕಾಲದಲ್ಲಿ ಮಧ್ವ ಸರೋವರದಲ್ಲಿ ಅನುಷ್ಟಾನ ಇರುತ್ತದೆ ಎಂದು ತಿಳಿಸಿದ್ದಾರೆ.



