ಕೋಟ : ಬೆಟ್ಟಿಂಗ್ ಅಪ್ಲಿಕೇಶನ್ ಮುಖಾಂತರ ಗೆದ್ದ ಹಣ ನೀಡದೆ ವಂಚನೆ ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಸಂದೇಶ್ ಕುಲಾಲ್ ಬಿಲ್ಲಾಡಿ, ಬ್ರಹ್ಮಾವರ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರಿಗೆ ಸುಮಾರು ಒಂದು ವರ್ಷದ ಹಿಂದೆ ಶಿರಿಯಾರ ವಾಸಿಯಾದ ಪ್ರದೀಪ್ ಎಂಬುವನು ಪರಿಚಯವಾಗಿದ್ದು ಅವನು “parker ” ಎಂಬುವ ಅಪ್ಲಿಕೇಶನ್ ಮೂಲಕ ಆನ್ ಲೈನ್ ಬೆಟ್ಟಿಂಗ್ ನಡೆಸುತ್ತಿದ್ದು ಬೆಟ್ಟಿಂಗ್ ಆಡಿದರೆ ಒಳ್ಳೆಯ ಲಾಭ ಮಾಡಬಹುದೆಂದು ಪ್ರಚೋದಿಸಿದ ಮೇರೆಗೆ ಪ್ರದೀಪ್ ಪರಿಚಯ ಮಾಡಿಕೊಟ್ಟ ಅವನ ತಂಡದವರಾದ ರೂಪೇಶ್, ಮನೋಜ್, ಧೀರಜ್ ರವರು ವಾಟ್ಸಪ್ ಮೂಲಕ ಕಳುಹಿಸುತ್ತಿದ್ದ ಅಪ್ಲೀಕೇಶನ್ ಲಿಂಕ್ ಐಡಿ ಹಾಗೂ ಪಾಸ್ವರ್ಡ್ ನ್ನು ಬಳಕೆ ಮಾಡಿಕೊಂಡು ಬೆಟ್ಟಿಂಗ್ ಆಡಿರುತ್ತಾರೆ.
ಬೆಟ್ಟಿಂಗ್ ಗೆ ಹಣವನ್ನು ಪ್ರದೀಪ್ ನ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಹಾಗೂ ಇತರೆ ವ್ಯಕ್ತಿಗಳ ಮೊಬೈಲ್ ನಂಬರ್ ಗಳಿಗೆ ಪೋನ್ ಪೇ, ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿರುತ್ತಾರೆ. ಬೆಟ್ಟಿಂಗ್ ನಲ್ಲಿ ಸುಮಾರು 15 ಲಕ್ಷ ರೂ ಹಣವನ್ನು ಗೆದ್ದಿದ್ದು ಸದರಿ ಹಣವನ್ನು ವಾಪಸ್ಸು ನೀಡದೆ ಮೋಸ ಮಾಡಿರುತ್ತಾರೆ.
ಸುಮಾರು ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್ ನನ್ನು ಭೇಟಿ ಮಾಡಿ ತಾನು ಗೆದ್ದಿರುವ 15 ಲಕ್ಷ ರೂ ಹಣವನ್ನು ವಾಪಸ್ಸು ನೀಡುವಂತೆ ಕೇಳಿದ್ದು, ಆಗ ಪ್ರದೀಪ್, ಅವನ ತಂಡವರು ಹಣವನ್ನು ನೀಡಲು ನಿರಾಕರಿಸಿ ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



