Home Crime ಬ್ರಹ್ಮಾವರ : ಭೀಕರ ರಸ್ತೆ ಅಪಘಾತ – ಸ್ಕೂಟರ್ ಸವಾರ ಮೃತ್ಯು…!!

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ – ಸ್ಕೂಟರ್ ಸವಾರ ಮೃತ್ಯು…!!

ಬ್ರಹ್ಮಾವರ, ಫೆ.21: ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಆರೂರು ಕ್ರಾಸ್‌ (ಕುಂಜಾಲು) ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಆರೂರು ಗ್ರಾಮದ ನಿವಾಸಿ ರಾಜೀವ್ ಕುಲಾಲ್ (51) ಅವರು ಬೆಳಿಗ್ಗೆ 7:15ರ ಸುಮಾರಿಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಆರೂರು ಕ್ರಾಸ್‌ ಕಡೆಗೆ ತೆರಳುತ್ತಿದ್ದ ವೇಳೆ, ಅವರ ಮುಂದಿನಿಂದ KA-22-Y-8606 ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರ್ ಸವಾರಿ ಮಾಡುತ್ತಿದ್ದ ಶೇಖರ್ ಟಿ ಕುಲಾಲ್ ಅವರು ಮುಖ್ಯ ರಸ್ತೆಯನ್ನು ದಾಟಿ ಡಿವೈಡರ್ ಪಾಸ್ ಮಾಡುತ್ತಿದ್ದರು.

ಈ ವೇಳೆ ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿದ್ದ KA-20-AA-8848 ನೋಂದಣಿ ಸಂಖ್ಯೆಯ ಗೂಡ್ಸ್ ವಾಹನವನ್ನು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಡಿಕ್ಕಿಯ ಪರಿಣಾಮ ಶೇಖರ್ ಟಿ ಕುಲಾಲ್ ಅವರು ವಾಹನದ ಬಲಭಾಗಕ್ಕೆ ಬಿದ್ದು ತಲೆಗೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.