Home Crime ಮಲ್ಪೆ : ಮೀನುಗಾರಿಕೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ಕಾರ್ಮಿಕ ನಾಪತ್ತೆ..!

ಮಲ್ಪೆ : ಮೀನುಗಾರಿಕೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ಕಾರ್ಮಿಕ ನಾಪತ್ತೆ..!

ಮಲ್ಪೆ:ಮೀನುಗಾರಿಕೆ ಬೋಟಿನಿಂದ ಆಕಸ್ಮಿಕವಾಗಿ ಅರಬ್ಬಿ ಸಮುದ್ರಕ್ಕೆ ಬಿದ್ದು ಮೀನುಗಾರ ಕಾರ್ಮಿಕನೊಬ್ಬ ಕಾಣೆಯಾಗಿರುವ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಪಿರ್ಯಾದುದಾರ ಜಿ. ಸೆಂತಿಲ್ ಕುಮಾರ್ (42), ತಂದೆ ಗೋವಿಂದನ್, ನಿವಾಸಿ 4/1132 ಅರಿಂಗಾರ್ ಅಣ್ಣಾ ಸ್ಟ್ರೀಟ್, ಅಂಬು ನಗರ ಗ್ರಾಮ ಇವರ ಭಾವ ನಾಗಲಿಂಗಮ್ (51) ಅವರು ಇಮ್ಯಾನುವೆಲ್ ಕಿರಣ ಎಂಬುವವರ IND-KA-02-MM-5985 ಸಂಖ್ಯೆಯ “ರಾಯಲ್ ಫಿಶರಿಶ್” ಎಂಬ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು.

ದಿನಾಂಕ 31-01-2026 ರಂದು ರಾತ್ರಿ ಸುಮಾರು 9.45 ಗಂಟೆಗೆ, ಸದ್ರಿ ಬೋಟಿನಲ್ಲಿ ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ತೆರಳುತ್ತಿದ್ದ ವೇಳೆ, ಆಕಸ್ಮಿಕವಾಗಿ ಸಮುದ್ರದ ನೀರಿಗೆ ಬಿದ್ದು ಅವರು ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026 ರಂತೆ “ಮನುಷ್ಯ ಕಾಣೆ” ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಹಾಗೂ ಶೋಧ ಕಾರ್ಯ ಕೈಗೊಳ್ಳಲಾಗಿದೆ.