ಉಡುಪಿ: ವಾರದ ಹಿಂದೆ ಕಾಣೆಯಾಗಿದ್ದ ಉಡುಪಿಯ ತೆಂಕಪೇಟೆಯ ಖ್ಯಾತ ಹೊಟೇಲ್ ಮಾಲಕ ಅಜಿತ್ ಕುಮಾರ್ ಅವರು ಪತ್ತೆಯಾಗಿದ್ದಾರೆ.
ಮನಸ್ಸಿಗೆ ಬೇಸರವಾಗಿದ್ದ ಕಾರಣಕ್ಕೆ ಯಾರಿಗೂ ಹೇಳದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದೆ ಎಂಬುವುದಾಗಿ ಅವರು ಉಡುಪಿ ನಗರ ಠಾಷೆಯ ಪೊಲೀಸರಲ್ಲಿ ತಿಳಿಸಿದ್ದಾರೆ.
ಇವರು ಎಪ್ರಿಲ್ ೧೨ಕ್ಕೆ ಪಾರ್ಸೆಲ್ ಕೊಡಲು ಸ್ಕೂಟರ್ ನಲ್ಲಿ ಹೋಗಿದ್ದವರು ಮರಳಿ ಹೊಟೇಲ್ ಗೂ ಬಾರದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.