Home Crime ಕಾರ್ಕಳ : ವ್ಯಕ್ತಿಯೊಬ್ಬರ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನ…!!

ಕಾರ್ಕಳ : ವ್ಯಕ್ತಿಯೊಬ್ಬರ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಆರೋಪಿಯೊಬ್ಬ ವ್ಯಕ್ತಿಯೊಬ್ಬರಿಗೆ ತಲವಾರಿನಿಂದ ಹಲ್ಲೆ ಯತ್ನಿಸಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ರಾಜೇಂದ್ರ ಎಂಬವರಿಗೆ ಆರೋಪಿಯಾದ ಗಣೇಶ್ ಪೂಜಾರಿ ತಲವಾರಿನಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ತಿಳಿಯಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 06/03/2026 ರಂದು 22:15 ಗಂಟೆಗೆ ಪಿರ್ಯಾದಿದಾರರಾದ ಪುಪ್ಪಲತಾ (34) ಗಂಡ. ರಾಜೇಂದ್ರ ವಾಸ, ಹೊಟೇಲ್‌ ಮಹಮ್ಮಾಯಿ ಪ್ಲಾಸ್ಟ ಪುಡ್‌ ನೀರೆ ಗ್ರಾಮ ಕಾರ್ಕಳ ಇವರು ಕಾರ್ಕಳ ತಾಲೂಕಿನ ನೀರೆ ಗ್ರಾಮದ ಬೈಲ್ಲೂರು ಪಂಚಾ ಯತ್ ಕಟ್ಡಡದ ಎದುರುಗಡೆ ಇರುವ ಮಹಾಮ್ಮಯಿ ಪಾಸ್ಟ ಪುಡ್ ಅಂಗಡಿ ಎದುರುಗಡೆ ಇರು ವಾಗ ಆರೋಪಿ ಗಣೇಶ ಪೂಜಾರಿ ಇತನು ಕೆಎ-20 ಎಮ್ಡಿ-8686 ನೇ ನಂಬ್ರದ ಕಾರಿನಲ್ಲಿ ಬಂದು ಫಿರ್ಯಾಧುದಾ ರರನ್ನು ಅಡ್ಡಗಟ್ಟಿ ಮುಂದೆ ಹೋಗ ದಂತೆ ತಡೆದು ನಿಲ್ಲಿಸಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿ ಇದ್ದ ತಲ್ವಾರನ್ನು ಬೀಸಿರುತ್ತಾನೆ, ಆಗ ಫಿರ್ಯಾ ಧುದಾರರು ತಪ್ಪಿಕೊಂಡಿರುತ್ತಾರೆ. ಆ ಬಳಿಕ ಫಿರ್ಯಾಧುದಾರರನ್ನು ಹಾಗೂ ಅವರ ಗಂಡ ನನ್ನು ಉದ್ದೇಶಿಸಿ ನನ್ನ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೇ ನಿಮ್ಮಿಬ್ಬರನ್ನು ಇದೇ ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡುತ್ತೇನೆ, ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ಬೈದಿರುತ್ತಾನೆ, ಫಿರ್ಯಾಧುದಾರರ ಗಂಡ ಆರೋಪಿಯ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿರುವುದಕ್ಕೆ ಆರೋಪಿ ಯು ಕೃತ್ಯ ಎಸಗಿರುವುದಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2026 ಕಲಂ: 109,232,126(2) 351(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.