Home Crime ಅನಾರೋಗ್ಯದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ…!!

ಅನಾರೋಗ್ಯದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ…!!

ಕುಂದಾಪುರ: ಅನಾರೋಗ್ಯ ಹಾಗೂ ನಿದ್ರಾಹೀನತೆಯಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಂಗಳೂರು ಗ್ರಾಮದಲ್ಲಿ ನಡೆದಿದೆ.

ಪಿರ್ಯಾದಿದಾರರಾದ ರಮೇಶ (35), ಅಂಕದಕಟ್ಟೆ ಗೋಪಾಲಾಡಿ, ಹಂಗಳೂರು ಗ್ರಾಮ ಇವರ ದೊಡ್ಡಪ್ಪನ ಮಗ ರಾಘವೇಂದ್ರ (41) ಅವರಿಗೆ ಬಿಪಿ ಖಾಯಿಲೆ ಇದ್ದು, ಹಲವು ದಿನಗಳಿಂದ ರಾತ್ರಿ ಸರಿಯಾಗಿ ನಿದ್ರೆ ಬಾರದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಈ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ರಾಘವೇಂದ್ರ ಅವರು ದಿನಾಂಕ 22-05-2026 ರಂದು ಬೆಳಿಗ್ಗೆ 8:30 ರಿಂದ 8:45 ಗಂಟೆಯ ನಡುವಿನ ಅವಧಿಯಲ್ಲಿ ಹಂಗಳೂರು ಗ್ರಾಮದ ನೇರಂಬಳ್ಳಿ ಗೋವೆಬೆಟ್ಟು ಪ್ರದೇಶದಲ್ಲಿರುವ ತಮ್ಮ ಹಳೆಯ ಮನೆಯಲ್ಲಿ ಮನೆಯ ಮಾಡಿನ ಪಖಾಸಿಗೆ ನೈಲಾನ್ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ಕ್ರಮಾಂಕ 15/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.