Home Crime ಅನನ್ಯ ಭಟ್ ನಾಪತ್ತೆ ಪ್ರಕರಣ ಎಸ್.ಐ.ಟಿ ಠಾಣೆಗೆ ಹಸ್ತಾಂತರ : ದ.ಕ. ಜಿಲ್ಲಾ ಎಸ್ಪಿ…!!

ಅನನ್ಯ ಭಟ್ ನಾಪತ್ತೆ ಪ್ರಕರಣ ಎಸ್.ಐ.ಟಿ ಠಾಣೆಗೆ ಹಸ್ತಾಂತರ : ದ.ಕ. ಜಿಲ್ಲಾ ಎಸ್ಪಿ…!!

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣದ ಬೆನ್ನಲ್ಲಿಯೇ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಆಕೆಯ ತಾಯಿ ಸುಜಾತಾ ಭಟ್ ಧರ್ಮಸ್ಥಳ ಠಾಣೆಗೆ ನೀಡಿದ್ದ ದೂರನ್ನು ಇದೀಗ ಎಸ್.ಐ.ಟಿ ಠಾಣೆಗೆ ಹಸ್ತಾಂತರಿಸಿರುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ ಅವರು, ಅನನ್ಯ ಭಟ್ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಾಯಿ ಸುಜಾತಾ ಭಟ್ ಜುಲೈ 15ರಂದು ಧರ್ಮಸ್ಥಳ‌ ಠಾಣೆಗೆ ದೂರು ನೀಡಿದ್ದರು.

ಧರ್ಮಸ್ಥಳ ಪೊಲೀಸರು ನಂ. 175/PTN/DPS/2025 ರಂತೆ ದೂರರ್ಜಿಯನ್ನು ಸ್ವೀಕರಿಸಿದ್ದರು. ಈ ದೂರರ್ಜಿಯನ್ನು ಡಿಜಿ ಹಾಗೂ ಐಜಿಪಿಯವರು ಆ.19 ರಂದು ನೀಡಿದ ಆದೇಶದಂತೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.