Home Latest ಏರ್ ಇಂಡಿಯಾ ವಿಮಾನ ದುರಂತ : ಪವಾಡ ಸದೃಶವಾಗಿ ಸಾವನ್ನೇ ಗೆದ್ದು ಬಂದ ಪ್ರಯಾಣಿಕ..!!

ಏರ್ ಇಂಡಿಯಾ ವಿಮಾನ ದುರಂತ : ಪವಾಡ ಸದೃಶವಾಗಿ ಸಾವನ್ನೇ ಗೆದ್ದು ಬಂದ ಪ್ರಯಾಣಿಕ..!!

ಅಹಮದಾಬಾದ್ : ಗುಜರಾತ್‌ನ ಏರ್ ಇಂಡಿಯಾ ವಿಮಾನ ಪತನವಾದ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ, ಪವಾಡ ಸದೃಶವಾಗಿ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್‌ ಕುಮಾರ್‌ ರಮೇಶ್‌ ಅವರು ಪಾರಾಗಿದ್ದಾರೆ.

ಇವರು ಲಂಡನ್‌ಗೆ ಹೋಗ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿದ್ದ 242 ಜನರಲ್ಲಿ ಆಸ್ಪತ್ರೆಯಲ್ಲಿ ಜೀವಂತವಾಗಿ ಸಿಕ್ಕ ಏಕೈಕ ಅದೃಷ್ಟವಂತ

“ನಾನು ಎಚ್ಚರವಾದಾಗ, ಸುತ್ತಲೂ ಬರೀ ಶವಗಳು ಬಿದ್ದಿದ್ವು… ನನಗೆ ಎದೆ ಒಡೆದಂತಾಯ್ತು. ಭಯದಿಂದ ಎದ್ದು ಓಡಲು ಶುರುಮಾಡಿದೆ,” ಅಂತ 40 ವರ್ಷದ ರಮೇಶ್ ವಿಶ್ವಾಸ್‌ಕುಮಾರ್ ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದ ಬಗ್ಗೆ ಹೇಳುವಾಗ ಅವರ ಮಾತುಗಳು ನಡುಗುತ್ತಿದ್ದವು.

ಟೇಕ್‌ ಆಫ್‌ ಆದ 30 ಸೆಕೆಂಡ್‌ ಅಷ್ಟೇ ಆಗಿತ್ತು ಅನ್ಸುತ್ತೆ, ದೊಡ್ಡ ಶಬ್ದ ಬಂತು, ಆಮೇಲೆ ವಿಮಾನ ನೆಲಕ್ಕೆ ಬಡಿದುಬಿಡ್ತು. ಎಲ್ಲವೂ ಎಷ್ಟೊಂದು ವೇಗವಾಗಿ ನಡೀತು ಅಂದ್ರೆ, ಏನಾಯ್ತು ಅಂತ ಅರ್ಥ ಮಾಡ್ಕೊಳ್ಳೋಕೆ ಸಮಯನೇ ಸಿಗಲಿಲ್ಲ,” ಅಂತ ವಿಶ್ವಸ್‌ ವಿವರಿಸಿದ್ರು. ಅವರ ಎದೆ, ಕಣ್ಣು, ಕಾಲುಗಳಿಗೆ ಏಟು ಬಿದ್ದಿದ್ರೂ, ಪ್ರಜ್ಞೆ ಇದೆ, ಮಾತನಾಡಬಲ್ಲರು. ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಪತ್ರಕರ್ತರು ಮಾತಾಡಿಸಿದಾಗ, ಆ ಭಯಾನಕ ದೃಶ್ಯವನ್ನ ಮರಳಿ ನೆನಪಿಸಿಕೊಳ್ತಿದ್ದಾಗ ಅವರ ಮಾತುಗಳು ತೊದಲುತ್ತಿದ್ದವು.

ರಮೇಶ್ ವಿಶ್ವಾಸ್‌ಕುಮಾರ್ ಬ್ರಿಟಿಷ್ ಪ್ರಜೆ. ಕೆಲ ದಿನಗಳಿಂದ ಕುಟುಂಬವನ್ನ ನೋಡೋಕೆ ಭಾರತಕ್ಕೆ ಬಂದಿದ್ರು. ಲಂಡನ್‌ಗೆ ತಮ್ಮ ಅಣ್ಣ, 45 ವರ್ಷದ ಅಜಯ್ ಕುಮಾರ್ ರಮೇಶ್ ಜೊತೆ ವಾಪಸ್ ಹೋಗ್ತಿದ್ರು. ಆದ್ರೆ ಈಗ ಅಜಯ್ ಎಲ್ಲಿ ಹೋದ್ರು ಅಂತ ಗೊತ್ತಿಲ್ಲ. “ನಾವು ಒಟ್ಟಿಗೆ ಬಂದ್ವಿ. ಅಜಯ್ ನನ್ನ ಜೊತೆಗೇ ಇದ್ದ. ಆದ್ರೆ ವಿಮಾನದಲ್ಲಿ ಅವನು ಬೇರೆ ಸೀಟಿನಲ್ಲಿ ಕೂತಿದ್ದ. ಈಗ ಅವನು ಎಲ್ಲಿದಾನೋ ಗೊತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ,” ಅಂತ ರಮೇಶ್ ಕುಮಾರ್ ವಿಶ್ವಾಸ್ ಕಣ್ಣೀರು ಹಾಕ್ತಿದ್ದಾರೆ.