Home Karavali Karnataka ಬೈಂದೂರು: ಹೊಸಾಡು ಶಾಲಾ ಮಕ್ಕಳ ಶೈಕ್ಷಣಿಕ ವರ್ಷದ ಆರಂಭ : ಮಕ್ಕಳಿಗೆ ಸಿಹಿ ತಿಂಡಿ ನೀಡಿ...

ಬೈಂದೂರು: ಹೊಸಾಡು ಶಾಲಾ ಮಕ್ಕಳ ಶೈಕ್ಷಣಿಕ ವರ್ಷದ ಆರಂಭ : ಮಕ್ಕಳಿಗೆ ಸಿಹಿ ತಿಂಡಿ ನೀಡಿ ತರಗತಿಗೆ ಬರಮಾಡಿಕೊಂಡ ಶಿಕ್ಷಕರು…!!

ಬೈಂದೂರು: 2024-25 ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಆರಂಭವನ್ನು ಒಂದು ಉತ್ಸವವನ್ನಾಗಿ ನಡೆಸುವ ಸಲುವಾಗಿ ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಶತಮಾನೋತ್ಸವ ಸಂಭ್ರಮದಲ್ಲಿರುವ ಹೊಸಾಡು ಶಾಲೆಯಲ್ಲಿ ಪ್ರಾರಂಭದ ದಿನದಂದು ಮಕ್ಕಳಿಗೆ ಸಿಹಿ ತಿಂಡಿ , ಬೆಲೂನ್ , ಇತ್ಯಾದಿ ಆಟಿಕೆ ವಸ್ತುಗಳನ್ನು ನೀಡಿ ಸಂಭ್ರಮದಿಂದ ಶಾಲೆಗೆ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಂಡರು

ಶಾಲೆಯ ಮೊದಲ ದಿನವೇ 30 ಪುಟಾಣಿ ಮಕ್ಕಳು ಹೊಸ ಮಕ್ಕಳ ದಾಖಲಾತಿಗಳು ನೋಡಿ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಶಾಲೆಯ ಶತಮಾನೋತ್ಸವ ಸಮಿತಿಯವರು ಸಂಭ್ರಮ ಸಡಗರದಿಂದ ಮಕ್ಕಳನ್ನು ತರಗತಿಗೆ ಬರಮಾಡಿಕೊಂಡು ಶಾಲೆಗೆ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಪುಟಾಣಿ ಮಕ್ಕಳು ತರಗತಿಯಲ್ಲಿ ಕುಳಿತು ಸಂಭ್ರಮಿಸಿದರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಡು 120 ವರ್ಷಕ್ಕೂ ಹೆಚ್ಚಿನ ಹಳೆಯದಾದ ಶಾಲೆ ಇದಾಗಿದ್ದು ಈ ಶಾಲೆಯು ಈ ವರ್ಷ ಶತಮನೋತ್ಸವ ಸಂಭ್ರಮಚರಣೆಯಲ್ಲಿದೆ, ಈ ಶಾಲೆಯು ಆಂಗ್ಲ ಮಾಧ್ಯಮ ಶಾಲೆಕ್ಕಿಂತ ಕಡಿಮೆ ಏನೂ ಇಲ್ಲ! ಶಾಲೆಯ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಉತ್ತಮ ಗುಣಮಟ್ಟ ಹೊಂದಿದೆ ಎಂದು ಸ್ಥಳೀಯ ಪೋಷಕರು ಹೆಮ್ಮೆಯಿಂದ ಹೇಳುತ್ತಾರೆ

ಈ ವೇಳೆ SDMC ಅಧ್ಯಕ್ಷ ರೇಖಾ ಗಣೇಶ್ ಉಪಾಧ್ಯಕ್ಷರು ರಾಘವೇಂದ್ರ ಆಚಾರ್ಯ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರ ಪೂಜಾರಿ ಆರಾಟೆ ಶಾಲೆಯ ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಶಿಕ್ಷಕ ವೃಂದ, ಹಾಗೂ ಸಿಬ್ಬಂದಿಗಳು, SDMC ಸದಸ್ಯರು, ಇತರರು ಹಾಜರಿದ್ದರು.