Home Crime ಚೆಕ್‌ಬೌನ್ಸ್‌ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮಾರೆಸಿಕೊಂಡಿದ್ದ ಆರೋಪಿಯ ಬಂಧನ…!!

ಚೆಕ್‌ಬೌನ್ಸ್‌ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮಾರೆಸಿಕೊಂಡಿದ್ದ ಆರೋಪಿಯ ಬಂಧನ…!!

ಬೆಳ್ತಂಗಡಿ: ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯವು ಸುಮಾರು ಐದು ವರ್ಷಗಳಿಂದ ಹಾಜರಾಗದೆ ತಲೆಮರೆಸಿದ್ದ ವಾರಂಟ್‌ ಆರೋಪಿಯನ್ನು ಫೆ.27 ರಂದು ಬಂಧಿಸಲಾಗಿದೆ.

ಆರೋಪಿ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಟಿ.ಪಿ.ಪ್ರಭಾಕರಣ್‌ ಮಗ ಸುಭಾಸ್‌ (37) ಎಂಬಾತನಾಗಿದ್ದು, ಬೆಳ್ತಂಗಡಿ ಪೊಲೀಸ್‌ ಉಪ ಅಧೀಕ್ಷಕರು ರೋಹಿಣಿ ಸಿ.ಕೆ. ಮತ್ತು ಪೊಲೀಸ್‌ ವೃತ್ತ ನಿರೀಕ್ಷಕ ರವಿ ಬಿ.ಎಸ್‌ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಉಪ ನಿರೀಕ್ಷಕರು ಸಮರ್ಥ್‌ ಅವರು ನೇತೃತ್ವದ ಸಿಬ್ಬಂದಿ ವೃಷಭ, ಚರಣ್‌ ರಾಜ್‌ ಬೆಂಗಳೂರು ಸುಂಕದಕಟ್ಟೆ ಎಂಬಲ್ಲಿಂದ ಫೆ.27 ರಂದು ಬಂಧಿಸಿ ಪುತ್ತೂರು ನ್ಯಾಯಾಧೀಶರ ಮುಂದೆ ಫೆ.28 ರಂದು ಹಾಜರುಪಡಿಸಿದ್ದಾರೆ.

ಬಳಿಕ ಚೆಕ್‌ಬೌನ್ಸ್‌ ಪ್ರಕರಣದ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸಿ ಪ್ರಕರಣ ಮುಕ್ತಾಯ ಮಾಡಿರುತ್ತಾರೆ.