Home Latest ಕಲ್ಮಾಡಿ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವಾರ್ಷಿಕ ಕಾಲಾವಧಿ ದರ್ಶನ ಸೇವೆ..!!

ಕಲ್ಮಾಡಿ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವಾರ್ಷಿಕ ಕಾಲಾವಧಿ ದರ್ಶನ ಸೇವೆ..!!

ಮಲ್ಪೆ : ಕಲ್ಮಾಡಿ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಇಂದು (ಮಾರ್ಚ್ 1) ವಾರ್ಷಿಕ ಕಾಲಾವಧಿ ದರ್ಶನ ಸೇವೆ ಭಕ್ತಿಭಾವದಿಂದ ನೆರವೇರಿತು.

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಮಧ್ಯಾಹ್ನ 12.30ಕ್ಕೆ ಅನ್ನ ಪ್ರಸಾದ ವಿತರಣೆ ನಡೆಯಿತು.

ಇಂದು ಸಂಜೆ 7 ಗಂಟೆಗೆ ಅಗೇಲ್ ಸೇವೆ (ಅಡು ಬಲಸುನಾ) ಹಾಗೂ ನಂತರ ಅಗೇಲ್ ಸೇವೆಯ ಅನ್ನಸಂತರ್ಪಣೆ ನೆರವೇರಲಿದೆ.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು, ಪ್ರಮುಖರು ಹಾಗೂ ಅನೇಕ ಭಕ್ತರು ಭಾಗವಹಿಸಿ ಸ್ವಾಮಿ ಕೊರಗಜ್ಜನ ದರ್ಶನ ಪಡೆದು ಆಶೀರ್ವಾದ ಪಡೆದರು.

ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಿದ್ದು, ಭಕ್ತರ ಭಾರೀ ಉಪಸ್ಥಿತಿ ಗಮನ ಸೆಳೆಯಿತು.