ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಇಬ್ಬರು ಯುವಕರು ಅಕ್ರಮವಾಗಿ MDMA ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಸುಭಾಷ್ ನಗರ ನಿವಾಸಿ ಮುದಾಸ್ಸಿರ್ ಹಾಗೂ ಉದ್ಯಾವರ ನಿವಾಸಿ ಅಡೆನ್ ಲೋಬೋ ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿ ಇದ್ದ ಸೊತ್ತುಗಳನ್ನು ದಸ್ತಗಿರಿ ಮಾಡಿದ್ದಾರೆ.
ಪ್ರಕರಣ ವಿವರ: ದಿನಾಂಕ 04/06/2025 ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಆರೋಪಿಗಳಾದ ಮುದಾಸ್ಸಿರ್ ಹಾಗೂ ಅಡೆನ್ ಲೋಬೋ ಎಂಬವರು MDMA ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವವರನ್ನು, ದಸ್ತಗಿರಿ ಮಾಡಿ, ಅವರ ವಶದಲ್ಲಿದ್ದ ಒಟ್ಟು 124.72 ಗ್ರಾಂ MDMA (ಅಂದಾಜು ಮೌಲ್ಯ-2.49.440/-) ಎಂಬ ಮಾದಕ ವಸ್ತು, P Oracle ಎಂಬ ಪ್ಲಾಸ್ಟೀಕ್ ಬಾಕ್ಸ್-1, ಇನ್ಸುಲಿನ್ ಸಿರಿಂಜ್-9, ENER-MECH ಎಂಬ ಕಪ್ಪು ಬ್ಯಾಗ್-1, Fresh ಎಂಬ ಪ್ಲಾಸ್ಟೀಕ್ ಬಾಕ್ಸ್-1, ವೇಯಿಂಗ್ ಮೇಶಿನ್-2, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಪ್ಲಾಸ್ಟೀಕ್ ಬಾಕ್ಸ್-1, 36-ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, Allen Solly Exclusive ಮೆಟಲ್ ಬಾಕ್ಸ್-1, ನಗದು 4540/ ರೂ, ಡ್ರಾಗನ್ ಚೂರಿ-1, OPPO ಮೊಬೈಲ್-1, Samsung ಮೊಬೈಲ್-2 ಸ್ವತ್ತುಗಳನ್ನು ವಷಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :
69/2025 u/s 8 C, 21 C, 22 C, r/w 29 NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಗಳಾದ 1)ಮುದಾಸ್ಸಿರ್ (23), ತಂದೆ:ಮೊಹಮ್ಮದ್ ವಾಸ: ಎಂ. ಎಸ್ ಮಂಜಿಲ್ ಸರ್ಕಾರಿಗುಡ್ಡೆ, ಸುಭಾಷ್ ನಗರ, ಕಾಪು ತಾಲೂಕು, ಉಡುಪಿ.
2) ಅಡೆನ್ ಲೋಬೋ(18), ತಂದೆ: ಅನಿಲ್ ಲೋಬೋ, ಉದ್ಯಾವರ, ಉಡುಪಿ ತಾಲೂಕು ರವರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.


