Home Crime ಅಕ್ರಮ ಜಾನುವಾರು ಸಾಗಾಟ : ಮೂವರು ಅರೆಸ್ಟ್…!!

ಅಕ್ರಮ ಜಾನುವಾರು ಸಾಗಾಟ : ಮೂವರು ಅರೆಸ್ಟ್…!!

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಈಚರ್ ವಾಹನದಲ್ಲಿ ಅಕ್ರಮವಾಗಿ ಹತ್ತು ಜಾನುವಾರಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಅಬ್ರಾರುಲ್ ಹಾಕ್ ಮೋಮಿನ್, ಮೊಹಮ್ಮದ್ ಹೈದರ್, ಮೊಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ.

ಆರೋಪಿಗಳ ಬಳಿ ಇದ್ದ ಸೊತ್ತುಗಳನ್ನು ಪೊಲೀಸರ ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ದಿನಾಂಕ: 05-06-2024 ರಂದು ಯಡ್ತರೆ ಜಂಕ್ಷನ್ ಬಳಿ ಬೆಳಗಿನ ಜಾವ 3:30 ಗಂಟೆಗೆ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ MH 17 CV 3786 EICHER ವಾಹನದಲ್ಲಿ ಅಕ್ರಮವಾಗಿ 10 ಜಾನುವಾರಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿರುವವನ್ನು ಮತ್ತು ಅದಕ್ಕೆ ಬೆಂಗಾವಲು ವಾಹನವಾಗಿರುವ KA 19 MM 8402 ಸ್ವಾದಿನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ: 116/2025 u/s 4,5, 7, 12 THE KARNATAKA PREVENTION OF SLAUGHTER AND PRESERVATION OF CATTLE ACT-2020 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳಾದ 1.ಅಬ್ರಾರುಲ್ ಹಾಕ್ ಮೋಮಿನ್(30) ತಂದೆ: ಹಸನ್ ಬಾಪ ಮೋಮಿನ್, ನವಾಯತ್ ಕಾಲೋನಿ ಭಟ್ಕಳ, 2. ಮೊಹಮ್ಮದ್ ತಂದೆ ಅಬು ಮೊಹಮ್ಮದ್ ಹೈದರ್ ವಾಸ ಬಂದರ್ ರೋಡ್ ಸೆಕೆಂಡ್ ಕ್ರಾಸ್ ಗಾಂಧಿನಗರ ಕೋಗ್ತಿ ಭಟ್ಕಳ 3.ಮೊಹಮ್ಮದ್ ಆರೀಫ್
ತಂದೆ:ಮೊಹಮ್ಮದ್ ರಫಿಕ್ ಜಾಲಿ ಭಟ್ಕಳ ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.