Home Crime ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಟ ದಿಲೀಪ್ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ...

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಟ ದಿಲೀಪ್ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರಕಾರ…!!

ಕೊಚ್ಚಿ : 2017ರ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲೆಯಾಳಂ ಸಿನೆಮಾ ನಟ ದಿಲೀಪ್ ಹಾಗೂ ಇತರರ ಖುಲಾಸೆ ಪ್ರಶ್ನಿಸಿ ಕೇರಳ ಸರಕಾರ ಶುಕ್ರವಾರ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ.

ಈ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾದ ಆರು ಜನರಿಗೆ ಶಿಕ್ಷೆಯನ್ನು ಹೆಚ್ಚಿಸುವಂತೆ ಕೂಡ ರಾಜ್ಯ ಸರಕಾರ ತನ್ನ ಮೇಲ್ಮನವಿಯಲ್ಲಿ ಕೋರಿದೆ.

ಪ್ರಕರಣದ 8ನೇ ಆರೋಪಿ ದಿಲೀಪ್ ಅಲ್ಲದೆ, ಚಾರ್ಲಿ ತೋಮಸ್(ಎ7), ಸನಿಲ್ ಕುಮಾರ್ ಆಲಿಯಾಸ್ ಮೇಸ್ತ್ರಿ ಸನಿಲ್ (ಎ9) ಹಾಗೂ ಶರತ್ (ಎ15)- ಈ ಮೂವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ಮೊದಲ ಆರು ಆರೋಪಿಗಳಾದ ಸುನಿ (ಪಲ್ಸರ್ ಸುನಿ), ಮಾರ್ಟಿನ್ ಆ್ಯಂಟನಿ, ಮಣಿಕಂಠನ್ ಬಿ., ವಿಜೇಶ್ ವಿ.ಪಿ, ಸಲೀಮ್ ಎಚ್. ಹಾಗೂ ಪ್ರದೀಪ್‌ನನ್ನು ವಿಚಾರಣಾ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು.

ಈ ಮೇಲ್ಮನವಿ ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ರಾಜ್ಯ ಸರಕಾರದ ಪರ ವಕೀಲರು ತಿಳಿಸಿದ್ದಾರೆ.