Home Crime ಅಕ್ರಮ ಗೋಹತ್ಯೆ ಪ್ರಕರಣ : 56 ಕೆಜಿ ಮಾಂಸ ಪತ್ತೆ : ಆರೋಪಿಯ ಮನೆ ಆವರಣ...

ಅಕ್ರಮ ಗೋಹತ್ಯೆ ಪ್ರಕರಣ : 56 ಕೆಜಿ ಮಾಂಸ ಪತ್ತೆ : ಆರೋಪಿಯ ಮನೆ ಆವರಣ ಜಪ್ತಿ…!!

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ಮನೆಯ ಆವರಣದಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದ್ದು ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ರಿ ಮನೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮಾಹಿತಿ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಸುತೇಶ್‌ ಕೆ.ಪಿ ಅವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳದಲ್ಲಿದ್ದ ಹೆಚ್‌. ಅಬ್ದುಲ್‌ ರಹಿಮಾನ್‌ ಎಂಬವರ ಮನೆಯ ಬಳಿ ತಲುಪಿದಾಗ, ಮನೆಯ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿಹೋಗಿರುತ್ತಾರೆ.

ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಲಾಗಿದ್ದು, ಸಮೀಪದಲ್ಲಿದ್ದ ಆಟೋ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು ಪತ್ತೆಯಾಗಿದ್ದು ಒಟ್ಟು 56 ಕೆಜಿ ಮಾಂಸ ಪತ್ತೆಯಾಗಿರುತ್ತದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳದಲ್ಲಿದ್ದ ಗೋಮಾಂಸ, ತೂಕದ ಯಂತ್ರ, ಆಟೋರಿಕ್ಷಾ, ಮೊಬೈಲ್ ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು, ಪ್ರಕರಣದ ಆರೋಪಿ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರು ಜಾನುವಾರುಗಳ ವಧೆಗಾಗಿ ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದೆ.