Home Karavali Karnataka ಕುಂದಾಪುರ : ಸಾವಿನಲ್ಲೂ ಒಂದಾದ ದಂಪತಿ…!!

ಕುಂದಾಪುರ : ಸಾವಿನಲ್ಲೂ ಒಂದಾದ ದಂಪತಿ…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಪತ್ನಿ ಸಾವನ್ನಪ್ಪಿದ 4 ಗಂಟೆಗಳ ಬಳಿಕ ಪತಿಯೂ ಸಾವನ್ನಪ್ಪಿದ ಘಟನೆ ಸಾಸ್ತಾನ ಗುಂಡ್ಮಿಯಲ್ಲಿ ಸಂಭವಿಸಿದೆ.

ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರಾದ ಜೆ. ರತ್ನಾಕರಾಯ (84) ಮತ್ತು ಅವರ ಪತ್ನಿ ಸರೋಜಮ್ಮ (72) ಸಾವಿನಲ್ಲೂ ಒಂದಾದ ದಂಪತಿಗಳಾಗಿದ್ದಾರೆ.

ಸರೋಜಮ್ಮ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ಪತ್ನಿಯ ಪಕ್ಕದಲ್ಲೇ ಇದ್ದ ರತ್ನಾಕರಾಯ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೃತ ದಂಪತಿ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.