ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಕೋಟ ವ್ಯಕ್ತಿಯೊಬ್ಬರು ಪರಿವರ್ತನಾ ಪುನರ್ ವಸತಿ ಕೇಂದ್ರ ಆಸ್ಪತ್ರೆಯ ವಾರ್ಡ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕುಮಾರ್ ಎಂದು ತಿಳಿದು ಬಂದಿದೆ.
ಘಟನೆ ವಿವರ : ಪಿರ್ಯಾದಿ ಜ್ಯೋತಿ (43) ಕೊಟೇಶ್ವರ, ಕುಂದಾಪುರ ತಾಲೂಕು ಇವರ ಗಂಡ ಕುಮಾರ ಪ್ರಾಯ: 48 ವರ್ಷ ಇವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು ಮದ್ಯ ಚಟವನ್ನು ಬಿಡಿಸುವ ಸಲುವಾಗಿ 2025 ನೇ ಫೆಬ್ರವರಿ ತಿಂಗಳಲ್ಲಿ ಕೋಟ ದಲ್ಲಿರುವ ಪರಿವರ್ತನಾ ಪುನರ್ ವಸತಿ ಕೇಂದ್ರ ಇಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ. ಆಸ್ಪತ್ರೆಯ ವೈದ್ಯಾಧಿಕಾರಿಯವರು ಸುಮಾರು 3 ತಿಂಗಳ ಹಿಂದೆಯೆ ಪಿರ್ಯಾದಿದಾರರ ಹತ್ತಿರ ಗಂಡನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಆದರೆ ಪಿರ್ಯಾದಿದಾರರು ಕಾರಣಾಂತರಗಳಿಂದ ಕರೆದುಕೊಂಡು ಹೋಗಲು ಸಾಧ್ಯವಾಗದಿದ್ದು ಪಿರ್ಯಾದಿದಾರರ ಗಂಡ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 31.05.2025 ರ ರಾತಿ ಊಟ ಆದ ಬಳಿಕ 10.00 ಗಂಟೆಯಿಂದ ದಿನಾಂಕ 01.06.2025 ರ ಬೆಳಿಗ್ಗೆ 05.30 ಗಂಟೆಯ ಮದ್ಯಾವಧಿಯಲ್ಲಿ ಕೋಟ ಪರಿವರ್ತನಾ ಪುನರ್ ವಸತಿ ಕೇಂದ್ರ ಆಸ್ಪತ್ರೆಯ ವಾರ್ಡ್ ನಲ್ಲಿ – ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.