ಉಡುಪಿ: ಎಂಟು ದಿನಗಳ ಹಿಂದೆ ಕಾಪು ಠಾಣಾ ವ್ಯಾಪ್ತಿಯ ಕುಂತಲನಗರದಲ್ಲಿ ರಾತ್ರಿ ಹೊತ್ತು ಮನನೊಂದ ಕೇರಳ ಮೂಲದ ಮಹಿಳೆಯೊಬ್ಬರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ , ಸಖಿ ಸೆಂಟರಿಗೆ ದಾಖಲಿಸಿದ್ದರು.
ಇದೀಗ ಸಂಬಂಧಿಕರು ಪತ್ತೆಯಾದ ಹಿನ್ನೆಲೆ ಮೂಲತಃ ಕೇರಳದ ಕಣ್ಣೂರಿನ ಶೀನ (50 ವ), ಮಹಿಳೆಯನ್ನು ತಮ್ಮೊಂದಿಗೆ ಊರಿಗೆ ಕರೆದುಕೊಂಡು ಹೋಗಿದ್ದಾರೆ.
ಮಹಿಳೆ ಎಂಟು ದಿನಗಳ ಹಿಂದೆ ರಾತ್ರಿ ಹೊತ್ತು ಕುಂತಲನಗರದ ಶಾಲೆಯೊಂದರ ಬಳಿ ಮನನೊಂದು ಅಸಹಾಯಕರಾಗಿ ತಿರುಗಾಡುತ್ತಿದ್ದು ಮಾಹಿತಿ ಮೇರೆಗೆ ವಿಶು ಶೆಟ್ಟಿ ರಕ್ಷಿಸಿದ್ದರು. ಮಹಿಳೆ ಮನಸ್ಸಿಗೆ ಆದ ನೋವಿನಿಂದ ಊರು ಬಿಟ್ಟು ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇದೀಗ ಮಹಿಳೆಯ ಸಹೋದರಿ ಸಹೋದರ ಹಾಗೂ ಇತರರು ಉಡುಪಿಗೆ ಬಂದಿದ್ದು ಕಾನೂನು ಪ್ರಕ್ರಿಯೆ ನಡೆಸಿ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಕೆಯ ಮೇಲೆ ಹೆಚ್ಚಿನ ಗಮನ ನೀಡಿ ಚಿಕಿತ್ಸೆ ಹಾಗೂ ಪ್ರೀತಿಯಿಂದ ಸಲಹುವುದಾಗಿ ತಿಳಿಸಿದ್ದಾರೆ.