Home Crime ಕುಂದಾಪುರ  : ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರಿಂದ ಲಕ್ಷಾಂತರ ರೂಪಾಯಿ ವಂಚನೆ…!!

ಕುಂದಾಪುರ  : ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರಿಂದ ಲಕ್ಷಾಂತರ ರೂಪಾಯಿ ವಂಚನೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರಿಗೆ ಇನ್ವೆಸ್ಟ್ ಮಾಡಿಸಿ ಲಾಭದ ಹಣ ಕೊಡವುದಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ವಂಚನೆಯಾದ ವ್ಯಕ್ತಿ ಪರಶುರಾಮ್ ಲಮಾಣಿ ಎಂದು ತಿಳಿದು ಬಂದಿದೆ.

ಈ ಪ್ರಕರಣದ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿ ಪರಶುರಾಮ್‌ ಲಮಾಣಿ (29) ಕಾಗಿಹಾಳೆ ತಾಂಡೆ ಸವದತ್ತಿ ಬೆಳಗಾವಿ ಇವರಿಗೆ ದಿನಾಂಕ: 18-02-2026 ರಂದು ಕಾವೇರಿ ಎಂಬವರು ಕರೆ ಮಾಡಿ https://alliidy.com ಎಂಬ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಟಾಸ್ಕ ನಲ್ಲಿ ಭಾಗವಹಿಸಿ ಅದರಿಂದ ನನಗೆ ಲಾಭ ಬಂದಿರುವುದಾಗಿ ತಿಳಿಸಿ ಪಿರ್ಯಾದಿದಾರರ ಬಳಿಯಲ್ಲಿಯೂ ಸಹ ಇನ್ವಸ್ಟ್‌ ಮಾಡಿ ಲಾಭ ಮಾಡಿಕೊಳ್ಳುವಂತೆ ತಿಳಿಸಿದ ಮೇರೆಗೆ ಪಿರ್ಯದಿದಾರರು ಬ್ಯಾಂಕ್‌ ಅಕೌಂಟಿಗೆ ದಿನಾಂಕ 19-02-2026 ರಂದು 200000/- ರೂಪಾಯಿಯನ್ನು RTGS ಮೂಲಕ ಗುಲಾಮ್‌ ಹುಸೈನ್‌ ಎಂಬವರ ಖಾತೆಗೆ ಹಣ ಹಾಕಿರುತ್ತಾರೆ, ಮತ್ತು ದಿನಾಂಕ 20-02-2026 ರಂದು ಬ್ಯಾಂಕ್‌ ಖಾತೆ ನಂಬ್ರ 240000/- ರೂಪಾಯಿ ಹಣವನ್ನು RTGS ಮೂಲಕ ಮೋನು ಯಾದವ್‌ ಎಂಬವರ ಖಾತೆಗೆ ಹಾಕಿರುತ್ತಾರೆ. ದಿನಾಂಕ 20-02-2026 ರಂದು 99,200 ರೂಪಾಯಿ ಹಣವನ್ನು RTGS ಮೂಲಕ ಕುಲದೀಪ್‌ ಎಂಬವರ ಖಾತೆಗೆ ಹಣವನ್ನು ಹಾಕಿರುತ್ತಾರೆ. ಈ ರೀತಿಯಲ್ಲಿ ಪಿರ್ಯಾದಿದಾರರ ಖಾತೆಯಲ್ಲಿದ್ದ ಒಟ್ಟು ಸುಮಾರು 539200/- ರೂಪಾಯಿ ಹಣವನ್ನು ಇನ್ವೆಸ್ಟ್‌ ಮಾಡಿದ್ದು ಇದರಿಂದ ಪಿರ್ಯಾದಿದಾರರಿಗೆ ಯಾವುದೇ ಲಾಭದ ಹಣವನ್ನು ಹಾಗೂ ಅಸಲನ್ನು ನೀಡದೇ ಯಾರೋ ಸೈಬರು ವಂಚಕರು ಪಡೆದುಕೊಂಡಿರುತ್ತಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 16/2026 ಕಲಂ: 318(4) BNS & U/S 66 (C) 66 (D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.