Home Crime ಉಡುಪಿ : ವ್ಯಕ್ತಿಯೊಬ್ಬರು ನಾಪತ್ತೆ…!!

ಉಡುಪಿ : ವ್ಯಕ್ತಿಯೊಬ್ಬರು ನಾಪತ್ತೆ…!!

ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆ ಖಾಯಿಲೆ ಇದ್ದು, ಮನೆಯಿಂದ ನಾಪತ್ತೆಯಾದ ಘಟನೆ ಸಂಭವಿಸಿದೆ.

ನಾಪತ್ತೆಯಾದ ವ್ಯಕ್ತಿ ಸುರೇಶ್ ಪೂಜಾರೊ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿ ಸುರೇಶ್‌ ಪೂಜಾರಿ (54) ಪುತ್ತೂರು ಸಂತೆಕಟ್ಟೆ, ಉಡುಪಿ ಇವರ ತಂದೆ ಸುರೇಶ್‌ ಪೂಜಾರಿ (54) ರವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಲಿಂಗೊಟ್ಟುಗುಡ್ಡೆಯಲ್ಲಿ ವಾಸಮಾಡಿಕೊಂಡಿದ್ದು, ಸುಮಾರು 30-35 ವರ್ಷಗಳಿಂದ ಮಾನಸಿಕ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದಿನಾಂಕ :21/02/2026 ರಂದು ಸಂಜೆ 6:00 ಗಂಟೆಗೆ ಫಿರ್ಯಾದುದಾರರು ಅವರ ತಾಯಿಗೆ ಆರೋಗ್ಯ ತಪಾಸಣೆ ಮಾಡಿಸಲು ಉಡುಪಿಗೆ ಹೋಗಿದ್ದು, ಆ ಸಮಯ ಮನೆಯಲ್ಲಿ ಸುರೇಶ್‌ ಪೂಜಾರಿ ಒಬ್ಬರೇ ಇರುತ್ತಾರೆ. ಸಮಯ 7:30 ಗಂಟೆಗೆ ಫಿರ್ಯಾದುದಾರರು ವಾಪಸ್ಸು ಮನೆಗೆ ಬಂದು ನೋಡಿದಾಗ ಸುರೇಶ್‌ ಪೂಜಾರಿ ರವರು ಮನೆಯಲ್ಲಿ ಇಲ್ಲದೇ ಇದ್ದು, ಸಂಬಧಿಕರ ಮನೆಗೂ ಹೋಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ:29/2026 ಕಲಂ: ಮನುಷ್ಯ ಕಾಣೆ ರಂತೆ ಪ್ರಕರಣ ದಾಖಲಾಗಿರುತ್ತದೆ.