Home Crime ಅಮಾಸೆಬೈಲು: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು…!!

ಅಮಾಸೆಬೈಲು: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು…!!

ಅಮಾಸೆಬೈಲು: ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಉಳ್ಳೂರು-74 ಗ್ರಾಮದ ಭುಜಂಗ ಶೆಟ್ಟಿ ಬಡ್ಡ(65) ಎಂಬವರ ಮಗ ಸುಧೀರ(26) ಎಂದು ಗುರುತಿಸಲಾ ಗಿದೆ.

ಇವರು ಫೆ.15ರಂದು ತೊಂಬಟ್ಟು ವಾರಾಹಿ ಹೊಳೆಗೆ ಈಜಾಡಲು ಹೋಗಿದ್ದು ಈಜು ಸರಿಯಾಗಿ ಬಾರದೇ ಹೊಳೆಯ ನೀರಿನಲ್ಲಿ ಆಕಸ್ಮಿಕವಾಗಿ ಮುಳಗಿ ದ್ದರೆನ್ನಲಾಗಿದೆ.

ಕೂಡಲೇ ಇವರನ್ನು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುಧೀರ್ ಫೆ.21ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.