ಬೈಂದೂರು: ವ್ಯಕ್ತಿಯೊಬ್ಬರು ಕೋಲಾಪುರದಿಂದ ಬೈಂದೂರಿಗೆ ಬಂದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಣೆಯಾದ ವ್ಯಕ್ತಿ ಮಹಾಲಿಂಗ ಎಂದು ತಿಳಿಯಲಾಗಿದೆ.
ಘಟನೆ : ಪಿರ್ಯಾದಿದಾರರಾದ ಮಹೇಶ (20), ನಾಗೂರು ಕಿರಿಮಂಜೇಶ್ವರ ಇವರ ತಂದೆ ಮಹಾಲಿಂಗ (55) ರವರು ಕೋಲಾಪುರದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 17/05/2025 ರಂದು ಬೆಳಿಗ್ಗೆ 10:00 ಗಂಟೆಗೆ ಕೋಲಾಪುರದಿಂದ ಬೈಂದೂರಿಗೆ ಬಂದವರು ಇಲ್ಲಿಯವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2025 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.