Home Karavali Karnataka ತಮಿಳು ನಟ ಕಮಲ್ ಹಾಸನ್ ಕೂಡಲೇ ತನ್ನ ಮಾತುಗಳನ್ನು ಹಿಂಪಡೆದುಕೊಂಡು ಕನ್ನಡಿಗರ ಕ್ಷಮೆಯಾಚಿಸಲಿ : ಅನ್ಸಾರ್...

ತಮಿಳು ನಟ ಕಮಲ್ ಹಾಸನ್ ಕೂಡಲೇ ತನ್ನ ಮಾತುಗಳನ್ನು ಹಿಂಪಡೆದುಕೊಂಡು ಕನ್ನಡಿಗರ ಕ್ಷಮೆಯಾಚಿಸಲಿ : ಅನ್ಸಾರ್ ಅಹಮದ್ ಉಡುಪಿ…!!

ಉಡುಪಿ : ತಮಿಳು ನಟ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ “ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಹುಟ್ಟಿದ್ದು ” ಎಂಬ ಹೇಳಿಕೆ ನೀಡಿದ್ದು, ಈ ಹೇಳಿಕೆ ಕೋಟ್ಯಾಂತರ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವಂತಿದೆ.

ಓರ್ವ ಜವಾಬ್ದಾರಿಯುತ ನಟನಿಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವಂತದ್ದಲ್ಲ, ನಟ ಕಮಲ್ ಹಾಸನ್ ಕೂಡಲೇ ತನ್ನ ಮಾತುಗಳನ್ನು ಹಿಂಪಡೆದುಕೊಂಡು ಕೋಟ್ಯಂತರ ಕನ್ನಡಿಗರ ಕ್ಷಮೆ ಯೋಚಿಸಬೇಕು ಇಲ್ಲವಾದಲ್ಲಿ ಅವರ ಮುಂಬರುವ ಚಿತ್ರ ಥಗ್ ಲೈಫ್ ಚಿತ್ರವನ್ನು ಪ್ರದರ್ಶಿಸಲು ಅನುವು ಮಾಡಿ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ಎಚ್ಚರಿಕೆಯನ್ನು ನೀಡಿದ್ದಾರೆ.