ಉಡುಪಿ: ಕರಾವಳಿ ಜಿಲ್ಲೆ ಅಲ್ಲಿ ಜಾತಿ, ಧರ್ಮ, ಮತ್ತು ರಾಜಕಾರಣಿಗಳ ಬೇಳೆ ಬೆಯಿಸಿ ಕೊಳ್ಳುವ ಮನಸ್ಥಿತಿ ಇರುದರಿಂದ, ರಾಜಕಾರಣಿಗಳ ಪ್ರಚೋದನಕಾರಿ ಹೇಳಿಕೆ ಗಳಿಂದ ನಿರಂತರವಾಗಿ ಅವಳಿ ಜಿಲ್ಲೆಯಲ್ಲಿ ಕೊಲೆಗಳು ಹೆಚ್ಚಾಗುತ್ತಿದೆ, ಮಾನ್ಯ ಗ್ರಹ ಸಚಿವರು ಘೋಷಿಸಿರುವ "ಕೋಮು ಹಿಂಸೆ ನಿಗ್ರಹ ಪಡೆ "ಕೂಡಲೇ ಕಾರ್ಯ ಪ್ರವೃತ್ತರಾಗುವ
ಅವಶ್ಯಕತೆ ಇದೆ ಎಂದು ನಾಗೇಂದ್ರ ಪುತ್ರನ್ ಹೇಳಿಕೆ ನೀಡಿದ್ದಾರೆ.
ಕಾನೂನಿನ ಮೇಲೆ ಭಯ, ಭಕ್ತಿ, ಇಲ್ಲದೆ ಕೆಲವು ಪುಂಡರಿಂದ ಇಂತಹ ಘಟನೆ ನೆಡೆಯುತ್ತಿದೆ, ಇಂತಹ ಪುಂಡರಿಗೆ ಕಾನೂನಿನ ಶಕ್ತಿ ಪ್ರದರ್ಶನ ಮಾಡಿದರೆ ಮಾತ್ರ ಇಂತಹ ಘಟನೆ ನಡೆಯುದು ಕಡಿಮೆ ಆಗುತ್ತದೆ. ಇವತ್ತು ಕೊಲೆ ಅದವರ ಪರ ಒಂದು ಸಂಘಟನೆ ಪ್ರತಿಭಟನೆ ಮಾಡುವುದು, ನಾಳೆ ಇನ್ನೊಂದು ಕೊಲೆ ಅದವರ ಪರ ಮತ್ತೊಂದು ಸಂಘಟನೆ ಪ್ರತಿಭಟನೆ ಮಾಡುವುದು ಮುಂದುವರಿದಲ್ಲಿ ಇಂತಹ ಘಟನೆ ನಡೆಯುತ್ತಾ ಇರುತ್ತದೆ, ಇದಕ್ಕೆಲ್ಲ ಪ್ರತಿಭಟನೆ ಸೂಕ್ತ ಅಲ್ಲ,, ಸರ್ವ ಸಮಾಜ ನೆಮ್ಮದಿ ಇಂದ ಇರಬೇಕಾದರೆ ಅಪರಾಧಿ ಯಾವುದೇ ಸಂಘಟನೆ ಆಗಿರಲಿ ಒದ್ದು ಒಳಗೆ ಹಾಕಿ ಕಾನೂನಿನ ಮತ್ತು ಸಂವಿಧಾನದ ರುಚಿ ತೋರಿಸಿದಾಗ ರಾಮ್, ರಹೀಮ್, ಯಲ್ಲಾ ನೆಮ್ಮದಿ ಇಂದ ಇರಲು ಸಾಧ್ಯ,, ರಾಜಕೀಯ ನಾಯಕರು ಮತ್ತು ಬಾಡಿಗೆ ಭಾಷಣ ಗಾರರ ಮಾತಿಗೆ ಇನ್ನಾದರೂ ಸಾರ್ವಜನಿಕರು ಮಣೆ ಹಾಕದೆ ಸರ್ವ ಧರ್ಮವು ಸಹೋದರ ಸಹೋದರಿ ಅಂತೆ ಬದುಕು ಕಟ್ಟಿಕೊಳ್ಳುದು
ಉತ್ತಮ.
ಮೃತ ರಹಿಮಾನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಶ್ರೀ ಮಹಾಗಣಪತಿ ಮತ್ತು ಆಂಜನೇಯ ಕೊಡಲಿ ಎಂದು ಕೋಟ ನಾಗೇಂದ್ರ ಪುತ್ರನ್ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಇವರ ಹೇಳಿದರು.