ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಹತ್ತಿರ ಮನೆಯೊಂದರಲ್ಲಿ ಕಳ್ಳರು ನುಗ್ಗಿ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ.
ಕಳ್ತೂರು ನಿವಾಸಿ ಚಂದ್ರಶೇಖರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ಘಟನೆ ವಿವರ : ಪಿರ್ಯಾದಿದಾರರಾದ ಚಂದ್ರಶೇಖರ (56), ಕಳ್ತೂರು ಗ್ರಾಮ ಬ್ರಹ್ಮಾವರ ಇವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದು, ಪಿರ್ಯಾದಿದಾರರ ಹೆಂಡತಿ ಹಾಗೂ ಮಕ್ಕಳು ಊರಿನಲ್ಲಿ ಇರುವುದಾಗಿದ್ದು ಪಿರ್ಯಾದಿದಾರರ ಹೆಂಡತಿ ಹಾಗೂ ಮಗಳು ದಿನಾಂಕ 08/05/2025 ರಂದು ಮನೆಗೆ ಬೀಗ ಹಾಕಿ ಕಿತ್ತೂರಿಗೆ ಹೋಗಿದ್ದು ದಿನಾಂಕ 25/05/2025 ರಂದು ಪಿರ್ಯದಿದಾರರ ಮಗ ಹಾಗೂ ಮಾವ ಕಳ್ತೂರಿನ ಮನೆಗೆ ಹೋಗಿ ಮನೆ ಸ್ವಚ್ಚ ಮಾಡಿ ಹೋಗಿದ್ದು ದಿನಾಂಕ 27/05/2025 ರಂದು ಪಿರ್ಯಾದಿದಾರರು ಹೆಂಡತಿ ಮಕ್ಕಳೊಂದಿಗೆ ಬೆಳಗಿನ ಜಾವ 4:00 ಗಂಟೆಗೆ ಮನೆಗೆ ಬಂದಾಗ ಯಾರೋ ಕಳ್ಳರು ಅಡುಗೆ ಮನೆ ಗೋಡೆಯಲ್ಲಿ ವೆಂಟಿಲೇಟರ್ ಅಳವಡಿಸಲು ಮರದ ಹಲೆಗೆ ಹಾಕಿ ಬಿಟ್ಟಿದ್ದ ಕಂಡಿಯ ಮುಖಾಂತರ ಮನೆಯ ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೊಣೆಯ ಮರದ ಕಪಾಟಿನ ಡ್ರಾವರ್‌ನ್ನು ಮೀಟಿ ತೆಗೆದು 60,000 ರೂಪಾಯಿ ಮೌಲ್ಯದ ಚಿನ್ನದ ಬಳೆಗಳು -2 ಉಂಗುರ -1 ಮತ್ತು ಚಿನ್ನದ ಪಾಟಿ 2 ನ್ನು ಹಾಗೂ ಇನ್ನೊಂದು ಡ್ರಾವರ್‌ನಿಂದ 20,000/- ನಗದು ಮತ್ತು ಒಂದು 5,000/- ರೂಪಾಯಿ ಮೌಲ್ಯದ ವಾಚ್ ಮತ್ತು ಹಾಗೂ ಬ್ಯಾಗ್‌ನಲ್ಲಿದ್ದ 4,000/- ಮೌಲ್ಯದ ಬೆಳ್ಳಿಯ ಕಾಲು ಚೈನ್ ಹಾಗೂ ನೇವಲ ಮತ್ತು ದೇವರ ಕೋಣೆಯಲ್ಲಿದ್ದ 32,000/- ರೂಪಾಯಿ ಮೌಲ್ಯದ ಬೆಳ್ಳಿಯ ಚೊಂಬು -1 ಬೆಳ್ಳಿಯ ದೊಡ್ಡ ದೀಪ -2 ಹಾಗೂ ಬೆಳ್ಳಿಯ ಸಣ್ಣ ದೀಪಗಳು -3 ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2025 ಕಲಂ: 305, 331(3), 331(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.