ಬ್ರಹ್ಮಾವರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಓಮ್ನಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡು, 8 ಕ್ವಿಂಟಲ್ಗೂ ಅಧಿಕ ಪಡಿತರ ಅಕ್ಕಿಯನ್ನು ಸ್ವಾಧೀನಪಡಿಸಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಜಾತಬೆಟ್ಟುವಿನಲ್ಲಿ ನಡೆದಿದೆ.
ದಿನಾಂಕ 28-11-2026 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿಯವರು ದೂರುದಾರರಾದ ಬಿ. ಶರತ್ ಶೆಟ್ಟಿ (44), ಆಹಾರ ನಿರೀಕ್ಷಕರು, ಬ್ರಹ್ಮಾವರ ತಾಲೂಕು, ಉಡುಪಿ ಇವರಿಗೆ ಕರೆ ಮಾಡಿ, ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ಓಮ್ನಿ ವಾಹನದಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿತ್ತು.
ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಾಗ, ಸ್ಥಳದಲ್ಲಿದ್ದ ಓಮ್ನಿ ವಾಹನದ ಚಾಲಕನು ವಾಹನವನ್ನು ನಿಲ್ಲಿಸಿ ಅಲ್ಲಿಂದ ಓಡಿಹೋಗಿದ್ದಾನೆ. ಅದರಂತೆ ದೂರುದಾರರು ಠಾಣೆಗೆ ಬಂದು ಪಂಚರ ಸಮಕ್ಷಮ ಅಕ್ಕಿ ತುಂಬಿರುವ ವಾಹನವನ್ನು ಪರಿಶೀಲಿಸಿದಾಗ KA-20-C-1287 ನೇ ಮಾರುತಿ ಸುಜುಕಿ ಕಂಪನಿಯ ಓಮ್ನಿ ವಾಹನವಾಗಿದ್ದು, ಸದ್ರಿ ವಾಹನದಲ್ಲಿ 29 ಚೀಲಗಳಲ್ಲಿ ಒಟ್ಟು 8 ಕ್ವಿಂಟಲ್ 21 ಕೆ.ಜಿ. ಅಕ್ಕಿ ಇತ್ತು.ಓಮ್ನಿ ಮಾಲೀಕ ಹಾಗೂ ಚಾಲಕ ಗುಜುರಿ ಮಹಮ್ಮದ್ ಸಾಸ್ತನ ಕೋಡಿ ರಸ್ತೆ ನಿವಾಸಿ ಈತ ಆರೋಪಿ ಎಂದು ತಿಳಿದು ಬಂದಿದೆ.
ಈ ಹಿಂದೆ ನಾಗೇಂದ್ರ ಪುತ್ರನ್ ಕೋಟ ಮಹಮ್ಮದ್ ಅಕ್ರಮ ಅಕ್ಕಿ ಸಾಗಾಟದ ವಿರುದ್ಧ ಧ್ವನಿ ಎತ್ತಿದ್ದಾಗ ನಾಗೇಂದ್ರ ಪುತ್ರನ್ ಮೇಲೆ ಪ್ರಕರಣ ದಾಖಲಾಗಿತ್ತು.
ಸದ್ರಿ ಅಕ್ಕಿ ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಸರ್ಕಾರ ಉಚಿತವಾಗಿ ಪಡಿತರ ಚೀಟಿದಾರರಿಗೆ ವಿತರಿಸುವ ಪಡಿತರ ಅಕ್ಕಿ ಎಂದು ಕಂಡುಬಂದಿದೆ. ಸದ್ರಿ ಅಕ್ಕಿಯ ಅಂದಾಜು ಬೆಲೆ ರೂ. 19,704 ಆಗಬಹುದು. ಓಮ್ನಿ ವಾಹನದ ಅಂದಾಜು ಬೆಲೆ ಸುಮಾರು ರೂ. 1,00,000 ಆಗಬಹುದು. ವಾಹನದಲ್ಲಿದ್ದ ತೂಕದ ಮೇಶಿನ್ ಅಂದಾಜು ಮೌಲ್ಯ ರೂ. 2,000 ಆಗಬಹುದು.
ಅಕ್ಕಿ, ತೂಕದ ಮೇಶಿನ್ ಹಾಗೂ ಓಮ್ನಿ ವಾಹನವನ್ನು ಪಂಚರ ಸಮಕ್ಷಮ ಮಹಜರು ಕ್ರಮ ಜರುಗಿಸಿ ಒಟ್ಟು ರೂ. 1,21,704 ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಗುಜುರಿ ಮಹಮ್ಮದ್ ಕೆಲವು ವರ್ಷಗಳಿಂದ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿದ್ದಾನೆ ಎಂಬ ಆರೋಪವಿದೆ.ಪೊಲೀಸರು ಈತನ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ ಆತ ಪುನಃ ಕೇಸ್ ನಿಂದ ಹೋರಗೆ ಬಂದು ಇದ್ದನೇ ಮಾಡುತ್ತಾನೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






