ಮಣಿಪಾಲ: ನಗರದಲ್ಲಿ ಕಳ್ಳತನವಾಗಿದ್ದ ಬೈಕ್ ಸಮೇತ ಆರೋಪಿಯೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮನೀಶ್ ಎ, ವಾಸ ಮಾರೆನಹಳ್ಳಿ, ಬೆಂಗಳೂರು ಎಂದು ಗುರುತಿಸಲಾಗಿದೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಆರ್.ಎಸ್.ಬಿ ಸಭಾಭವನ ಹತ್ತಿರ, ಮೋಟಾರ್ ಸೈಕಲ್ ನಂ. KA 20 EU 3431 ಶೈನ್ ಬೈಕ್ ಅನ್ನು ದಿನಾಂಕ 20.10.2026 ರಂದು ಬೆಳಿಗ್ಗೆ 9:30 ಗಂಟೆಗೆ ವೆಘಾ ಟ್ರಾನ್ಸ್ಪೋರ್ಟ್ಸ್ ಹತ್ತಿರ ಶೆಡ್ನಲ್ಲಿ ನಿಲ್ಲಿಸಿ ಮಾಲೀಕರು ಹುಬ್ಬಳ್ಳಿಗೆ ಹೋಗಿದ್ದರು. ದಿನಾಂಕ 22.10.2026 ರಂದು ರಾತ್ರಿ 9:00 ಗಂಟೆಗೆ ವಾಪಸ್ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಿನಾಂಕ 18.11.2026 ರಂದು ಮಣಿಪಾಲ ಠಾಣಾ ಎಎಸ್ಐ ವಿವೇಕಾನಂದ, ಹೆಚ್.ಸಿ. ಮಹಮ್ಮದ್ ಅಜ್ಮಲ್, ಪಿ.ಸಿ. ಮಂಜುನಾಥ್ ಎಂ.ಆರ್. ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿವಳ್ಳಿ ಗ್ರಾಮದ ಮಣ್ಣಪಳ್ಳ ಕೆರೆ ರಸ್ತೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ವಿಚಾರಿಸಿದಾಗ, ಆತ ಮನೀಶ್ ಎಂದು ತಿಳಿಸಿದ್ದಾನೆ. ಆತನ ಬಳಿ ಇದ್ದ ಬೈಕ್ ಪರಿಶೀಲಿಸಿದಾಗ ಅದು ಕಳ್ಳತನವಾಗಿದ್ದ KA 20 EU 3431 ಶೈನ್ ಬೈಕ್ ಆಗಿರುವುದು ಕಂಡುಬಂದಿದೆ. ಆತ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆತನನ್ನು ಹಾಗೂ ಬೈಕ್ ಅನ್ನು ವಶಪಡಿಸಿಕೊಳ್ಳಲಾಯಿತು.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪಿ.ಎಸ್.ಐ. ಶಂಭುಲಿಂಗಯ್ಯ ಎಂ., ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಎಸ್ಐ ವಿವೇಕಾನಂದ, ಹೆಚ್.ಸಿ. ಮಹಮ್ಮದ್ ಅಜ್ಮಲ್, ಮಂಜುನಾಥ್ ಎಂ.ಆರ್. ಪಾಲ್ಗೊಂಡಿದ್ದರು.





