Home Crime ಬೈಂದೂರು: ಉಪ್ಪುಂದ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೋದ ವೃದ್ಧ ಕಾಣೆ…!!

ಬೈಂದೂರು: ಉಪ್ಪುಂದ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೋದ ವೃದ್ಧ ಕಾಣೆ…!!

ಬೈಂದೂರು: ಉಡುಪಿ ಜಿಲ್ಲೆಯ ಉಪ್ಪುಂದ ಜಾತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ವೃದ್ಧರು ಬಳಿಕ ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವ ಘಟನೆ ನಡೆದಿದೆ.

ಕಾಣೆಯಾದವರನ್ನು ಲಕ್ಷ್ಮಣ (75) ಎಂದು ಗುರುತಿಸಲಾಗಿದೆ. ದೂರುದಾರರು ಅವರ ಪುತ್ರ ಸುರೇಶ ಚಂದನ (46), ತಗ್ಗರ್ಸೆ ಗ್ರಾಮ, ಬೈಂದೂರು ಎಂದು ತಿಳಿಯಲಾಗಿದೆ.

ದಿನಾಂಕ 27-11-2026 ರಂದು ಸಂಜೆ 6:00 ಗಂಟೆಗೆ ಲಕ್ಷ್ಮಣ ಅವರು ಉಪ್ಪುಂದದ ಜಾತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ, ಗಂಡಸು ಕಾಣೆಯಾದ ಪ್ರಕರಣವಾಗಿ ದಾಖಲಾಗಿದ್ದು, ಪೊಲೀಸರು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.