ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಸಹೋದರನ ಮಗಳ ಮನೆಯ ಬಳಿ ನಡೆದ ಗಲಾಟೆ ಮಾತಿನ ಚಕಮಕಿಗೆ ತಿರುಗಿ, ಹರಿತವಾದ ಆಯುಧದಿಂದ ಚುಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದ ನಂದರಬೆಟ್ಟುವಿನಲ್ಲಿ ನ.24ರಂದು ರಾತ್ರಿ ನಡೆದಿದೆ.
ಮೃತರನ್ನು ಚೆನ್ನಯ್ಯ ಪೂಜಾರಿ (45) ಎಂದು ತಿಳಿದು ಬಂದಿದೆ ಮ
ನ.24ರಂದು ರಾತ್ರಿ ಸುಮಾರು 7 ಗಂಟೆಗೆ ಚೆನ್ನಯ್ಯ ಪೂಜಾರಿ ಅವರು ತಮ್ಮ ಸಹೋದರನ ಮಗಳು ವಾಸವಿದ್ದ ಮನೆಯ ಬಳಿ ಗಲಾಟೆ ನಡೆಸುತ್ತಿದ್ದರೆನ್ನಲಾಗಿದೆ.
ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಸಹೋದರನ ಮಗಳು ಹರಿತವಾದ ಆಯುಧದಿಂದ ಅವರಿಗೆ ಚುಚ್ಚಿದ್ದಾಳೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.ಗಂಭೀರವಾಗಿ ಗಾಯಗೊಂಡ ಚೆನ್ನಯ್ಯ ಪೂಜಾರಿ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ದೂರು ಸ್ವೀಕರಿಸಿರುವ ವಿಟ್ಲ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.



