ಉಡುಪಿ : ಕರ್ಕಶ ಶಬ್ದ ಮಾಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವಂತೆ ಸಂಚರಿಸುತ್ತಿದ್ದ ಬೈಕ್‌ಗಳ ವಿರುದ್ಧ ಉಡುಪಿ ಸಂಚಾರಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಸಂಚಾರಿ ಠಾಣೆಯ ಪಿಎಸ್‌ಐ ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬೈಕ್‌ಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳಿಗೆ ಅಳವಡಿಸಲಾಗಿದ್ದ ಕರ್ಕಶ ಶಬ್ದ ಹೊರಸೂಸುವ ಮಾಡಿಫೈಡ್ ಸೈಲೆನ್ಸರ್‌ಗಳನ್ನು ತೆರವುಗೊಳಿಸಿ ನಾಶಪಡಿಸಲಾಗಿದೆ.
ನಗರದಲ್ಲಿ ಶಬ್ದ ಮಾಲಿನ್ಯ ಉಂಟುಮಾಡುವ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುವ ರೀತಿಯಲ್ಲಿ ಬೈಕ್‌ಗಳನ್ನು ಮಾಡಿಫೈ ಮಾಡಿ ಸಂಚರಿಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




