Home Crime ಬ್ರಹ್ಮಾವರ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ…!!

ಬ್ರಹ್ಮಾವರ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ…!!

ಬ್ರಹ್ಮಾವರ:‌ ಉಡುಪಿ ಜಿಲ್ಲೆಯ ಬಾರಕೂರು ಸಮೀಪದ ಕಚ್ಚೂರಿನಲ್ಲಿ 32 ವರ್ಷದ ಯುವಕನೊಬ್ಬ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಮೃತ ಯುವಕನನ್ನು ಪ್ರಶಾಂತ್ (32) ಎಂದು ತಿಳಿಯಲಾಗಿದೆ.

ಇವರು ಉಡುಪಿಯ ಸೊಸೈಟಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಕಚ್ಚೂರಿನಲ್ಲಿರುವ ತನ್ನ ತಾಯಿಯ ಸಹೋದರ ಗಣೇಶ್ ಕುಂದರ್ (70) ಅವರ ಮನೆಯಲ್ಲಿ ವಾಸವಾಗಿದ್ದರು.

ಬೆಳಿಗ್ಗೆ 10ರಿಂದ 10.30ರ ನಡುವಿನ ಅವಧಿಯಲ್ಲಿ ಪ್ರಶಾಂತ್ ಅವರು ತಮ್ಮ ಕೊಠಡಿಯ ಬಾಗಿಲು ಹಾಕಿಕೊಂಡು ಸೀಲಿಂಗ್‌ಗೆ ಅಳವಡಿಸಿದ್ದ ಹುಕ್‌ಗೆ ನೈಲಾನ್ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್  ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.