Home Crime ಮಣಿಪಾಲ: ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದ ವ್ಯಕ್ತಿಯ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು...

ಮಣಿಪಾಲ: ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದ ವ್ಯಕ್ತಿಯ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿ…!!

ಮಣಿಪಾಲ: ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದ ವ್ಯಕ್ತಿಯ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪರ್ಕಳದ ವೋರ್‌ವಾಡಿ ಕೋರ್ಟ್ ಪ್ರದೇಶದಲ್ಲಿ ನಡೆದಿದೆ.

ಪರ್ಕಳದ ನಿವಾಸಿ ಹೆಚ್. ಜಗದೀಶ್ ನಾಯಕ್ ಅವರು ನ.18ರಂದು ಮನೆಗೆ ಬೀಗ ಹಾಕಿ ಪತ್ನಿಯ ತವರು ಮನೆಯಾದ ಬೆಂಗಳೂರಿಗೆ ತೆರಳಿದ್ದರು.

ಮಧ್ಯಾಹ್ನ 3 ಗಂಟೆಗೆ ಮನೆಗೆ ವಾಪಸಾದಾಗ ಮನೆಯ ಮುಖ್ಯದ್ವಾರ ತೆರೆದಿರುವುದು ಕಂಡುಬಂದಿದೆ.

ಬಳಿಕ ಪರಿಶೀಲಿಸಿದಾಗ ಬೆಡ್‌ರೂಮ್‌ನಲ್ಲಿದ್ದ 2 ಜೊತೆ ಚಿನ್ನದ ಕಿವಿಯೋಲೆ (6 ಗ್ರಾಂ), 2 ಚಿನ್ನದ ಬಳೆಗಳು (24 ಗ್ರಾಂ), ಮಹಾಲಸ ದೇವರ ಚಿತ್ರವಿರುವ ಚಿನ್ನದ ಸರ (24 ಗ್ರಾಂ), 150 ಗ್ರಾಂ ತೂಕದ ಬೆಳ್ಳಿಯ ತಂಬಿಗೆ ಹಾಗೂ ₹10,000 ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹4,57,000 ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಸುತ್ತಿದ್ದಾರೆ.