Home Latest ಕಟಪಾಡಿ: ನಿವೃತ್ತ ಶಿಕ್ಷಕಿ ಡಯಾನ ಡಿ’ಸಿಲ್ವ ಹೃದಯಾಘಾತದಿಂದ ನಿಧನ…!!

ಕಟಪಾಡಿ: ನಿವೃತ್ತ ಶಿಕ್ಷಕಿ ಡಯಾನ ಡಿ’ಸಿಲ್ವ ಹೃದಯಾಘಾತದಿಂದ ನಿಧನ…!!

ಕಟಪಾಡಿ: ಚಹಾ ಸೇವಿಸಿದ ಬಳಿಕ ಹೃದಯಾಘಾತ ಸಂಭವಿಸಿ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಕಟಪಾಡಿ ಮೂಡಬೆಟ್ಟು ಸರಕಾರಿಗುಡ್ಡೆಯ ಮನೆಯಲ್ಲಿ ಸಂಭವಿಸಿದೆ.

ಮೃತರನ್ನು ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯ ನಿವೃತ್ತ ಶಿಕ್ಷಕಿ ಡಯಾನ ಡಿ’ಸಿಲ್ವ (63) ಎಂದು ತಿಳಿಯಲಾಗಿದೆ.

ಸಂಜೆ ತಮ್ಮ ಮನೆಯಲ್ಲಿ ಪತಿ, ಶಂಕರಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಜಾರ್ಜ್ ಡಿ’ಸಿಲ್ವ ಅವರೊಂದಿಗೆ ಡಯಾನ ಅವರು ಚಹಾ ಸೇವಿಸಿದ್ದರು. ಬಳಿಕ ಪತಿ ಚಹಾ ಕುಡಿದ ಲೋಟವನ್ನು ಒಳಗಿಡಲು ತೆರಳಿದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಸಹಾಯಕ್ಕಾಗಿ ಪತಿಯನ್ನು ಕರೆದಿದ್ದು, ಕೂಡಲೇ ಅವರನ್ನು ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತರು 33 ವರ್ಷಗಳ ಕಾಲ ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಒಂದು ವಾರದ ಹಿಂದೆಯಷ್ಟೇ ಪುತ್ರಿಯ ವಿವಾಹ ಸಮಾರಂಭದಲ್ಲಿ ಸಂತಸದಿಂದ ಪಾಲ್ಗೊಂಡಿದ್ದರು.

ಮೃತರು ಪತಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.