ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರು ಕೆಲಸಕ್ಕೆ ಹೋದವರು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದವರು ಹರೀಂದ್ರ ಯು ಆರ್ ಎಂದು ತಿಳಿಯಲಾಗಿದೆ.
ಘಟನೆ ವಿವರ: ಪಿರ್ಯಾದಿದಾರರಾಧ ಸುರೇಂದ್ರ (45) ಗುಂಡಿಬೈಲು, ಶಿವಳ್ಳಿ ಇವರ ಅಣ್ಣ ಹರೀಂದ್ರ ಯು ಆರ್ (48) ರವರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿದ ನಂತರ ಕೃಷ್ಣಮಠಕ್ಕೆ ಸಂಬಂಧಪಟ್ಟ ಬಡಗುಮಾಳಿಗೆಯ ಸಿಬ್ಬಂದಿಯವರ ವಸತಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದು, ದಿನಾಂಕ 07/05/2025 ರಂದು ಬೆಳಿಗ್ಗೆ 9:58 ಗಂಟೆಗೆ ಫಿರ್ಯಾದುದಾರರಿಗೆ ಕರೆ ಮಾಡಿ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದು ಅದಕ್ಕೆ ಫಿರ್ಯಾದುದಾರರು ತಿಳಿಸುತ್ತೇನೆ ಎಂದು ಹೇಳಿದ್ದು, ದಿನಾಂಕ 08/05/2025 ರಂದು ಬೆಳಿಗ್ಗೆ 8:55 ಗಂಟೆಗೆ ಫಿರ್ಯಾದುದಾರರು ಅಣ್ಣನಿಗೆ ಕರೆ ಮಾಡಿದಾಗ ದೂರವಾಣಿ ಸಂಖ್ಯೆ ಸ್ವಿಚ್ ಆಫ್ ಬರುತ್ತಿದ್ದು ಫಿರ್ಯಾದುದಾರರು ಅವರ ಅಣ್ಣ ಉಳಿದುಕೊಳ್ಳುತ್ತಿದ್ದ ವಸತಿ ಗೃಹದಲ್ಲಿ ಹೋಗಿ ನೋಡಿದಾಗ ಹರೀಂದ್ರ ರವರು ಅಲ್ಲಿ ಇಲ್ಲದೇ ಇದ್ದು, ಕೃಷ್ಣ ಮಠಕ್ಕೆ ಕೆಲಸಕ್ಕೂ ಹೋಗದೇ , ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2025 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.