ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಮಂಜೇಶ್ವರ ಬಾಯರ ನಿವಾಸಿ ಜರ್ನಾಧನ (38). ಇವರು ದಿನಾಂಕ 19.11.2026 ರಂದು ಸಂಜೆ ತಮ್ಮ ಬಾಬ್ತು KL-59-C-4274 ನೇ ನಂಬ್ರದ ಲಾರಿಯಲ್ಲಿ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಕೆಂಪು ಕಲ್ಲುಗಳನ್ನು ಲೋಡ್ ಮಾಡಿ ಸಾಗಿಸುತ್ತಾ ಬಂಟ್ವಾಳ ಪೆರುವಾಯಿ ಗ್ರಾಮದ ದೇವಸ್ಥಾನವೊಂದರ ಬಳಿ ತಲುಪಿದ್ದರು.
ಈ ಸಂದರ್ಭದಲ್ಲಿ ದೂರುದಾರರ ಪರಿಚಯದ ಆರೋಪಿಗಳಾದ ಸತೀಶ್ ಮಣಿಯಾಣಿ ಮತ್ತು ಶ್ರೀನಿವಾಸ ರೈ ಎಂಬವರು ಲಾರಿಯನ್ನು ತಡೆದು, ದೂರುದಾರರನ್ನು ಲಾರಿಯಿಂದ ಎಳೆದು ಹಾಕಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.



