Home Crime ಶಿರ್ವಾ: ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ವ್ಯಕ್ತಿ ಆತ್ಮಹತ್ಯೆ…!!

ಶಿರ್ವಾ: ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ವ್ಯಕ್ತಿ ಆತ್ಮಹತ್ಯೆ…!!

ಶಿರ್ವಾ: ಉಡುಪಿ ಜಿಲ್ಲೆಯ ಕಾಪು ತಾಲೂಕು ಕಟ್ಟಿಂಗೇರಿ ಗ್ರಾಮದ ಎಡ್ಮೇರು ಕಟ್ಟದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ಕರುಣಾಕರ ಶೆಟ್ಟಿ (68) ಎಂದು ಗುರುತಿಸಲಾಗಿದೆ. ಇವರು ಬಿ.ಪಿ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ದಿನಾಂಕ 19/11/2026 ರಂದು ಬೆಳಗ್ಗೆ 11:00 ಗಂಟೆಯಿಂದ 20/11/2026 ರಂದು ಬೆಳಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ, ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ವಾಸ್ತವ್ಯದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮೃತರ ಅಳಿಯ ಶಶೀಂದ್ರ ಎಂ. ಶೆಟ್ಟಿ (59), ಹೀರೆಬೆಟ್ಟು ಗ್ರಾಮ, ಉಡುಪಿ ಇವರು ನೀಡಿದ ದೂರಿನ ಮೇರೆಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.