ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ಹಳೆಯಂಗಡಿಗೆ ಹೋಗಿ ಬರುವುದಾಗಿ ಹೇಳಿ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟಿದ್ದ 38 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದವರನ್ನು ಕಾರ್ತಿಕ್ ದಾಸ್ (38) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ಸುಮಾರು 2:30ಕ್ಕೆ ತಾಯಿ ಅರುಂಧತಿ ದಾಸ್ ಅವರಲ್ಲಿ ಹಳೆಯಂಗಡಿಗೆ ಹೋಗಿ ಬರುವುದಾಗಿ ಹೇಳಿ ತಮ್ಮ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿದ್ದರು.
ಆದರೆ, ಬಹಳ ಸಮಯ ಕಳೆದರೂ ಕಾರ್ತಿಕ್ ದಾಸ್ ಮನೆಗೆ ವಾಪಸಾಗಿಲ್ಲ. ಈ ನಡುವೆ ಶ್ವೇತಾ ಎಂಬವರು ಕಾರ್ತಿಕ್ ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಿಲ್ಲ ಎನ್ನಲಾಗಿದೆ.
ಕುಟುಂಬಸ್ಥರು ಹಾಗೂ ಪರಿಚಯಸ್ಥರ ಸಹಾಯದಿಂದ ಎಲ್ಲೆಡೆ ಹುಡುಕಾಟ ನಡೆಸಿದರೂ ಕಾರ್ತಿಕ್ ದಾಸ್ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ತಾಯಿ ಅರುಂಧತಿ ದಾಸ್ ಅವರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಪತ್ತೆಯಾದ ಮಗನನ್ನು ಪತ್ತೆಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.
ನಾಪತ್ತೆಯಾದವರ ವಿವರ:
- ಹೆಸರು: ಕಾರ್ತಿಕ್ ದಾಸ್
- ಪ್ರಾಯ: 38 ವರ್ಷ
- ಮನೆಯಿಂದ ತೆರಳಿದ ದಿನಾಂಕ: 12-11-2026
- ಸಮಯ: ಮಧ್ಯಾಹ್ನ 2:30
- ತೆರಳಿದ ಸ್ಥಳ: ಹಳೆಯಂಗಡಿ
- ವಾಹನ: ಸ್ಕೂಟರ್
- ನೋಂದಣಿ ಸಂಖ್ಯೆ: KA-19-HR-4942
ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಕಾರ್ತಿಕ್ ದಾಸ್ ಅವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.



