Home Crime ಮಂಗಳೂರು : ನಕಲಿ ಲಿಂಕ್ ಕಳುಹಿಸಿ 4.26ಲಕ್ಷ ರೂ. ವಂಚನೆ…!!

ಮಂಗಳೂರು : ನಕಲಿ ಲಿಂಕ್ ಕಳುಹಿಸಿ 4.26ಲಕ್ಷ ರೂ. ವಂಚನೆ…!!

ಮಂಗಳೂರು : ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸುವಂತೆ ಟ್ರಕ್ ಚಾಲಕರೊಬ್ಬರಿಗೆ ಆರ್‌ಟಿಒ ಹೆಸರಿನಲ್ಲಿ ನಕಲಿ ಲಿಂಕ್ ಕಳುಹಿಸಿ ಮೊಬೈಲ್‌ಗೆ ಆ್ಯಪ್ ಡೌನ್‌ಲೋಡ್ ಮಾಡಿಸಿ ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ 4.26ಲಕ್ಷ ರೂ.ವನ್ನು ಅಪರಿಚಿತರು ವರ್ಗಾಯಿಸಿಕೊಂಡು ವಂಚನೆಗೈದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮೊಬೈಲ್‌ಗೆ ಅ.31ರಂದು ಬೆಳಗ್ಗೆ ಟ್ರಾಫಿಕ್ ವಯಲೇಶನ್ ಸಿಸಿ ಟಿವಿ ಫೂಟೇಜ್ ಪೇ ಆನ್‌ಲೈನ್ ಎಂಬ ಸಂದೇಶ ಬಂದಿತ್ತು. ಅದರಲ್ಲಿ ತನ್ನ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಲಿಂಕ್ ಕಳುಹಿಸಲಾಗಿತ್ತು. ಅದನ್ನು ಕ್ಲಿಕ್ ಮಾಡಿದಾಗ ತನ್ನ ಗಮನಕ್ಕೆ ಬಾರದೆ ಒಂದು ಆ್ಯಪ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿತ್ತು. ನ.10ರಂದು ತನ್ನ ಉಳಿತಾಯ ಖಾತೆಯಿಂದ ಹಂತ ಹಂತವಾಗಿ 4,26,434 ರೂ. ವರ್ಗಾವಣೆಯಾಗಿದೆ ಎಂದು 41ವರ್ಷದ ಟ್ರಕ್ ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.