Home Crime ಮಣಿಪಾಲ: ಫೋಟೋಗ್ರಾಫರ್‌ಗೆ ನಂಬಿಸಿ 7.50 ಲಕ್ಷ ರೂ. ಮೌಲ್ಯದ ಕ್ಯಾಮರಾ ಪರಿಕರ ಕಳವು…!!

ಮಣಿಪಾಲ: ಫೋಟೋಗ್ರಾಫರ್‌ಗೆ ನಂಬಿಸಿ 7.50 ಲಕ್ಷ ರೂ. ಮೌಲ್ಯದ ಕ್ಯಾಮರಾ ಪರಿಕರ ಕಳವು…!!

ಮಣಿಪಾಲ: ಫೋಟೋಗ್ರಫಿಗಾಗಿ ಕರೆದುಕೊಂಡು ಬಂದು ಹೋಟೆಲ್ ರೂಮಿನಲ್ಲಿ 7.50 ಲಕ್ಷ ರೂ. ಮೌಲ್ಯದ ಕ್ಯಾಮರಾ ಮತ್ತು ಪರಿಕರಗಳನ್ನು ಕಳವು ಮಾಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ದೂರುದಾರ ಸೈಫ್ ಅಲಿ (28) ಬೆಳಗಾವಿಯವರು ಮೀರಜ್‌ನಲ್ಲಿ ಆದಿತ್ಯ ಸುತಾರ ಜೊತೆ ಫೋಟೋ ಸ್ಟುಡಿಯೋ ನಡೆಸುತ್ತಿದ್ದಾರೆ. ಅವರ ಅಣ್ಣ ಸಲ್ಮಾನ್ ಚಾಂದವಾಲೆ ಮೂಲಕ ಪರಿಚಯವಾದ ಕಾರ್ತಿಕ್ ನಾಯ್ಡು ಎಂಬಾತ ಉಡುಪಿಯಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡಲು ಒಳ್ಳೆಯ ಕ್ಯಾಮರಾ ಮತ್ತು ಫೋಟೋಗ್ರಾಫರ್ ಬೇಕು ಎಂದು ಹೇಳಿದ್ದ.

ಅದನ್ನು ನಂಬಿ ಸೈಫ್ ಅಲಿ ಮತ್ತು ಆದಿತ್ಯ ಸುತಾರ ಅ.21 ರಂದು ಬೆಳಗಾವಿಯಿಂದ KA-22-Z-3277 ಕಾರಿನಲ್ಲಿ ಕಾರ್ತಿಕ್ ನಾಯ್ಡು ಜೊತೆ ಮಣಿಪಾಲಕ್ಕೆ ಬಂದು ಹೋಟೆಲ್ ಗ್ರೀನ್ ಪಾರ್ಕ್ ನಲ್ಲಿ ರೂಮ್ ಮಾಡಿ ಉಳಿದಿದ್ದರು. ರಾತ್ರಿ 8 ಗಂಟೆಗೆ ಕಾರ್ತಿಕ್ ಇಬ್ಬರನ್ನು ಊಟ ತರಲು ಹೊರಗೆ ಕಳುಹಿಸಿದ್ದ. ರಾತ್ರಿ 8:45ಕ್ಕೆ ವಾಪಸ್ ಬಂದಾಗ ರೂಮ್ ಲಾಕ್ ಆಗಿದ್ದು, ಕಾರ್ತಿಕ್ ಫೋನ್ ಸ್ವಿಚ್ ಆಫ್ ಆಗಿತ್ತು.

ಹೋಟೆಲ್ ಸಿಬ್ಬಂದಿಯ ಮಾಸ್ಟರ್ ಕೀಯಿಂದ ಬಾಗಿಲು ತೆರೆದು ನೋಡಿದಾಗ ರೂಮಿನಲ್ಲಿದ್ದ Canon R6 Mark 2 ಕ್ಯಾಮರಾ, USM 24-105 ಲೆನ್ಸ್, 35MM ಲೆನ್ಸ್, Sigma 50mm ಲೆನ್ಸ್, 85MM ಲೆನ್ಸ್, 6 ಮೆಮೊರಿ ಕಾರ್ಡ್, 4 ಬ್ಯಾಟರಿ LPE6P-7, V860 Mark 2 ಫ್ಲ್ಯಾಶ್, 2 ಚಾರ್ಜರ್, ಕ್ಯಾನನ್ ಅಡಾಪ್ಟರ್, ಕ್ಯಾಮರಾ ಬ್ಯಾಗ್, ವಾಚ್, ಸಿಲ್ವರ್ ಚೈನ್ ಸೇರಿ ಒಟ್ಟು 7.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 171/2026 ಕಲಂ 305 BNS ರಂತೆ ಪ್ರಕರಣ ದಾಖಲಾಗಿದೆ.