Home Crime ಬಾಡಿಗೆ ಮನೆ ಡಿಪಾಸಿಟ್ ವಿವಾದ : ಎಂಬ್ರಾಯಿಡರಿ ಮಾಲೀಕನ ಮೇಲೆ ಆಸಿಡ್‌ ಎರಚಿದ ಭೂಪ…!!

ಬಾಡಿಗೆ ಮನೆ ಡಿಪಾಸಿಟ್ ವಿವಾದ : ಎಂಬ್ರಾಯಿಡರಿ ಮಾಲೀಕನ ಮೇಲೆ ಆಸಿಡ್‌ ಎರಚಿದ ಭೂಪ…!!

ಉಡುಪಿ : ಬಾಡಿಗೆ ಮನೆಯ ಠೇವಣಿ ಹಣ ಹಿಂದಿರುಗಿಸುವ ವಿಚಾರಕ್ಕೆ ಉಂಟಾದ ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವ ಎಂಬ್ರಾಯಿಡರಿ ಅಂಗಡಿ ಮಾಲೀಕನ ಮೇಲೆ ಆಸಿಡ್‌ ಎರಚಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ನಗರದ ಇಂದ್ರಾಳಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಬುಡ್ನಾರು ನಿವಾಸಿ ನವೀನ್‌ ಕುಮಾರ್‌ ಎಂಬವರೇ ಹಲ್ಲೆಗೆ ಒಳಗಾದವರು. ಸುರೇಶ್‌ ಆಚಾರ್ಯ ಎಂಬಾತನೇ ನವೀನ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದಾತ. ಸುರೇಶ್‌ ಆಚಾರ್ಯ ಆಚಾರ್ಯ ನವೀನ್‌ ಕುಮಾರ್‌ ಅವರ ಅಂಗಡಿಗೆ ತೆರಳಿ ಹಣ ನೀಡುವಂತೆ ಕೇಳಿದ್ದಾನೆ.

ಆದರೆ ನವೀನ್‌ ಕುಮಾರ್‌ ಹಣ ನೀಡಲು ಒಪ್ಪದೇ ಇದ್ದಾಗ, ಕಾರಿನಲ್ಲಿದ್ದ ಮಚ್ಚು ಹಾಗೂ ಆಸಿಡ್‌ ಬಾಟಲಿಯನ್ನು ತಂದು ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಏಕಾಏಕಿ ಸುರೇಶ್‌ ಆಚಾರ್ಯ ಆಸಿಡ್‌ ಎರಚಿ ಪರಾರಿಯಾಗಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.