ಉಡುಪಿ : ನಗರದಲ್ಲಿ ಮಾದಕ ವಸ್ತು M.D.M.A ಪೌಡರ್, ಹೈಡ್ರೋಗಾಂಜಾ, ಎಂ.ಡಿ.ಎಂ.ಎ ಟ್ಯಾಬ್ಲೆಟ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ರೂ, 3,31,500/- ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ವಿಜಯ ಪೂಜಾರಿ, ಪಿ ಎ ಮೊಹಮ್ಮದ್ ಸಮ್ಮಾಸ, ಆಕಾಶ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ರವರು ಹಾಗೂ ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್ ರವರ ನೇತೃತ್ವದಲ್ಲಿ ಮಹೇಶ ಟಿ.ಎಂ, ಪಿ.ಎಸ್.ಐ, ಉಡುಪಿ ಸಂಚಾರ ಠಾಣೆರವರೊಂದಿಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಬುಡ್ನಾರ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಪೌಡರ್, ಹೈಡ್ರೋಗಾಂಜಾ, ಎಂ.ಡಿ.ಎಂ.ಎ ಟ್ಯಾಬ್ಲೆಟ್ ಹೊಂದಿದ್ದ ಹಾಗೂ ಕಾಪು, ಉಡುಪಿ, ಮಣಿಪಾಲ, ಕಾರ್ಕಳದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1)ವಿಜಯ ಪೂಜಾರಿ(36), ತಂದೆ : ದಿ. ಸದಾಶಿವ , ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ.2)ಪಿ ಎ ಮೊಹಮ್ಮದ್ ಸಮ್ಮಾಸ್(24), ತಂದೆ : ಎಂ ಡಿ ಅಬ್ದುಲ್ ಜಬ್ಬಾರ್, ಹಾರ್ಜಿಡ್ಡು ಕುಕ್ಕಂದೂರು ಉಡುಪಿ ತಾಲೂಕು ಮತ್ತು ಜಿಲ್ಲೆ. ಮತ್ತು 3)ಆಕಾಶ್ ಶೆಟ್ಟಿ (20) ವರ್ಷ, ತಂದೆ : ದಿ. ರಘುಶೆಟ್ಟ , ಕುಂಟಿಬೈಲು ಮಿಯಾರು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು ಎಂಬವರನ್ನು ದಸ್ತಗಿರಿಗೊಳಿಸಿ 04 ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ, ಎಂ.ಡಿ.ಎಂ.ಎ ಟ್ಯಾಬ್ಲೆಟ್, 3 ಗ್ರಾಂ ತೂಕದ ಗಾಂಜಾ ಹಾಗೂ ಸೊತ್ತುಗಳನ್ನು ಸಾಗಾಟಕ್ಕೆ ಬಳಸಿದ ಕಾರು-1 ಹಾಗೂ ಇತರೇ ಸೊತ್ತುಗಳನ್ನು ವಶಪಡಿಸಿಕೊಂಡು ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ : 95/2026 ಕಲಂ 8(C)̧ 20 (ಸಿ), 22 (ಎ) NDPS ACT 1985 ರಂತೆ ಪ್ರಕರಣ ದಾಖಲಿಸಲಾಗಿದೆ.
ಈ ಕಾಯ೯ಚರಣೆಯಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ರವರ ಮಾರ್ಗದಶನದಲ್ಲಿ ಮಲ್ಪೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ, ಉಡುಪಿ ಸಂಚಾರ ಠಾಣೆಯ ಪಿ.ಎಸ್.ಐ ಮಹೇಶ್ ಟಿ.ಎಂ, ಸೈಬರ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಹಿರಿಯಡ್ಕ ಪೊಲೀಸ್ ಠಾಣೆಯ ಪ್ರವೀಣ್ ಶೆಟ್ಟಿಗಾರ್, ಮಲ್ಪೆ ವೃತ್ತ ಕಛೇರಿಯ ಇಂದ್ರೇಶ್ , ಹನುಮಂತ ಅಸ್ಕಿ, ಮನು ಕುಮಾರ್, ರಶ್ಮೀ ಹೆಗಡೆ, ರವಿ ಕುಮಾರ್ ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಹಾಗೂ ದಿನೇಶ್ ರವರನ್ನೊಳಗೊಂಡ ವಿಶೇಷ ತಂಡವು ಕಾರ್ಯಚರಣೆ ನಡೆಸಿರುತ್ತಾರೆ.












