Home Latest ಉಡುಪಿ : ಬೈಕ್ ಸ್ಕಿಡ್ : ಸವಾರ ಸಾವು

ಉಡುಪಿ : ಬೈಕ್ ಸ್ಕಿಡ್ : ಸವಾರ ಸಾವು

 

ಉಡುಪಿ : ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಶ್ರೀಬಬ್ಬುಸ್ವಾಮಿ ದೈವಸ್ಥಾನದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಫೆ.5ರಂದು ರಾತ್ರಿ ವೇಳೆ ನಡೆದಿದೆ.

 

ಮೃತರನ್ನು ಸೆಲ್ವ ಕುಮಾರ್ ಎಂದು ಗುರುತಿಸಲಾಗಿದೆ. ಕೊರಂಗ್ರಪಾಡಿ ಕಡೆಯಿಂದ ಮಾರ್ಪಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ.

 

ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಸೆಲ್ವ ಕುಮಾರ್, ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.