Home Crime MDMA ಮಾರಾಟಕ್ಕೆ ಯತ್ನ – ಆರೋಪಿ ಬಂಧನ : 1.25 ಲಕ್ಷ ಮೌಲ್ಯದ ಸೊತ್ತು ವಶ…!!

MDMA ಮಾರಾಟಕ್ಕೆ ಯತ್ನ – ಆರೋಪಿ ಬಂಧನ : 1.25 ಲಕ್ಷ ಮೌಲ್ಯದ ಸೊತ್ತು ವಶ…!!

ಮಂಗಳೂರು: ನಗರದ ಪಡೀಲ್ ಓವರ್‌ಬ್ರಿಡ್ಜ್ ಬಳಿ MDMA ಮಾದಕವಸ್ತು ಮಾರಾಟಕ್ಕೆ ಕಾಯುತ್ತಿದ್ದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ರೀಶಾದ್ @ ಮೊಹಮ್ಮದ್ ರೀಶಾದ್.

ಕಂಕನಾಡಿ ನಗರ ಪೊಲೀಸ್ ಠಾಣೆಯ PSI ವಿನಾಯಕ ಬಾವಿಕಟ್ಟಿ ಅವರು ನ.04 ರಂದು ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಪಡೀಲ್ ಜಂಕ್ಷನ್‌ನಿಂದ ಮುಂದೆ ಸಂಚರಿಸುತ್ತಾ ಪಡೀಲ್ ಓವರ್‌ಬ್ರಿಡ್ಜ್ ಬಳಿ ತಲುಪಿದ್ದರು. ಅಲ್ಲಿಂದ ಎಡಕ್ಕೆ ಇರುವ ದಾರಿಯಿಂದ ಸರಿಪಳ್ಳದ ಕಡೆಗೆ ಹೋಗುತ್ತಿರುವಾಗ ರೈಲ್ವೇ ಟ್ರ್ಯಾಕ್ ಬಳಿ ಆರೋಪಿ ಅನುಮಾನಾಸ್ಪದವಾಗಿ ನಿಂತಿದ್ದ.

ಪೊಲೀಸರನ್ನು ನೋಡಿ ಓಡಿ ಹೋಗಲು ಯತ್ನಿಸಿದ ಆರೋಪಿಯನ್ನು ಸಿಬ್ಬಂದಿಗಳ ಸಹಾಯದಿಂದ ಸಂಜೆ 5 ಗಂಟೆಗೆ ವಶಕ್ಕೆ ಪಡೆಯಲಾಯಿತು.

ವಶಪಡಿಸಿಕೊಂಡ ಸೊತ್ತುಗಳು ತಲಾ 6 ಗ್ರಾಂ ತೂಕದ MDMA ತುಂಬಿರುವ ಪ್ಲಾಸ್ಟಿಕ್ ಜಿಪ್ ಲಾಕ್ ಕವರ್‌ನ 2 ಪ್ಯಾಕೆಟ್‌ಗಳು – ಒಟ್ಟು 12 ಗ್ರಾಂ, ಅಂದಾಜು ಮೌಲ್ಯ ರೂ. 1,20,000,ಖಾಲಿ ಪ್ಲಾಸ್ಟಿಕ್ ಜಿಪ್ ಲಾಕ್ ಕವರ್‌ಗಳು – 11,DARK GREY ಬಣ್ಣದ OPPO ಮೊಬೈಲ್ ಫೋನ್ – 1

ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ. 1,25,000 ಎಂದು ಅಂದಾಜಿಸಲಾಗಿದೆ.

ಆರೋಪಿ NDPS ಕಾಯ್ದೆಯನ್ನು ಉಲ್ಲಂಘಿಸಿ, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಆರೋಗ್ಯಕ್ಕೆ ಹಾನಿಕಾರಕ MDMA ಮಾದಕವಸ್ತುವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.