ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿರುವ ಭಕ್ತ ಕನಕದಾಸರ ಶಿಲಾಮಯ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಡಿಯೋ ಕರೆ ಮೂಲಕ ಅನುಗ್ರಹ ಸಂದೇಶ ನೀಡಿದರು. ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು, ಉತ್ತರಾಧಿ ಮಠದ ವಿದ್ವಾಂಸರಾದ ಸತ್ಯಧ್ಯಾನ ಆಚಾರ್ಯ ಕಟ್ಟಿ.
ವಿದ್ಯಾಸಿಂಹಾಚಾರ್ ಮಾಹುಲಿ, ವಿದ್ಯಾಧೀಶಾಚಾರ್ ಗುತ್ತಲ್, ಪ್ರಕಾಶ್ ಆಚಾರ್ ಸವಣೂರು, ಪಾಂಡುರಂಗಾಚಾರ್ ರೊಟ್ಟಿ, ಆನಂದತೀರ್ಥಾಚಾರ್ ಚಿಮ್ಮಲಿ ಹಾಗೂ ಕಾರ್ತಿಕ್ ಆಚಾರ್ ಉಪಸ್ಥಿತರಿದ್ದರು.



