ಅಜೆಕಾರು: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಜೆಕಾರು ಉಗ್ರಾಣಿಬೆಟ್ಟು ನಿವಾಸಿ ಉಮೇಶ್ ಶೆಟ್ಟಿ (41) ಮೃತಪಟ್ಟ ಯುವಕ.
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಉಗ್ರಾಣಿಬೆಟ್ಟು ಎಂಬಲ್ಲಿನ ಉಮೇಶ್ ಶೆಟ್ಟಿ(41ವ) ಎಂಬವರು ಕಡಿಮೆ ರಕ್ತದೊತ್ತಡ ಹಾಗೂ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಜು.25 ರಂದು ಮುಂಜಾನೆ ಮನೆಯಿಂದ ಹೊರಹೋಗುವ ವೇಳೆ ಉಮೇಶ್ ಕಾಲು ಜಾರಿ ಬಿದ್ದಿದ್ದರು. ಬಳಿಕ 10.30ರ ವೇಳೆಗೆ ಜಗಲಿಯಲ್ಲಿ ಮಲಗಿದ್ದ ವೇಳೆ ರಕ್ತವಾಂತಿ ಮಾಡಿಕೊಂಡಿದ್ದರು. ವಿಚಾರಿಸಿದಾಗ ಹಿಂದಿನ ದಿನವೂ ರಕ್ತವಾಂತಿ ಮಾಡಿಕೊಂಡಿರುವುದಾಗಿ ಹೇಳಿದ್ದರು. ಬಳಿಕ ಎದೆನೋವು ಎಂದು ಮಲಗಿದ್ದ ಉಮೇಶ್ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗಾಗಲೇ ಮೃತಪಟ್ಟಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




