ಮಣಿಪಾಲ: ಉಡುಪಿ ತಾಲೂಕು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರೈಲು ಹರಿದು ಅಪರಿಚಿತ ವೃದ್ಧರೊಬ್ಬರು ಮೃತಪಟ್ಟ ಘಟನೆ ನವೆಂಬರ್ 6ರಂದು ತಡರಾತ್ರಿ ನಡೆದಿದೆ.
ಇಂದ್ರಾಳಿ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವ್ಯ (57) ಅವರಿಗೆ ರಾತ್ರಿ ಸುಮಾರು 12:38ರ ವೇಳೆಗೆ ಆರ್‌ಪಿಎಫ್ ಸಿಬ್ಬಂದಿ ಪ್ರಶಾಂತ್ ಕೆ.ಬಿ. ಮಾಹಿತಿ ನೀಡಿದ್ದಾರೆ.
ರೈಲ್ವೇ ನಿಲ್ದಾಣದ ಮುಖ್ಯ ಟ್ರ್ಯಾಕ್ ಕೆಎಂ 692/1, ಲೂಪ್ 1ರ 18ನೇ ಬೋಗಿಯ ಸಮೀಪ ಸುಮಾರು 70ರಿಂದ 75 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೇಲೆ ರೈಲು ಹರಿದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ವ್ಯಕ್ತಿಯ ವಿಳಾಸ ಹಾಗೂ ಗುರುತು ಪತ್ತೆಯಾಗಿಲ್ಲ. ಈ ಕುರಿತು ಮಣಿಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



