ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 71 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಅಕ್ಟೋಬರ್ 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. 8024
ಈ ಬಾರಿ ಜಾನಪದ, ಸಂಗೀತ, ಚಲನಚಿತ್ರ, ಯಕ್ಷಗಾನ, ರಂಗಭೂಮಿ, ಸಮಾಜ ಸೇವೆ, ಸಾಹಿತ್ಯ, ನ್ಯಾಯಾಂಗ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಲಾಗಿದೆ. ಪ್ರಶಸ್ತಿಯು 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ.
ಕರಾವಳಿಯ ಸಾಧಕರಿಗೆ ಮನ್ನಣೆ:
ಕರಾವಳಿ ಜಿಲ್ಲೆಗಳ ಸಾಧಕರಿಗೂ ಈ ಬಾರಿ ಪ್ರಶಸ್ತಿ ಲಭಿಸಿದೆ.
ಉಡುಪಿ ಜಿಲ್ಲೆ:ಗೋಪಾಲ ಗಾಣಿಗ – ಯಕ್ಷಗಾನ ಕ್ಷೇತ್ರ
ಬಿ.ವಿ. ಆಚಾರ್ಯ ,ನ್ಯಾಯಾಂಗ ಕ್ಷೇತ್ರ – ಹಿರಿಯ ನ್ಯಾಯವಾದಿ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಡಾ. ಚಂದ್ರ ಶೇಖರ್ ವೈದ್ಯಕೀಯ ಕ್ಷೇತ್ರ.
ದಕ್ಷಿಣ ಕನ್ನಡ ಜಿಲ್ಲೆ: ವಿಶ್ವನಾಥ್ ಸುವರ್ಣ – ಮಾಧ್ಯಮ / ಛಾಯಾಚಿತ್ರ,ಎ.ಸಿ. ಭಂಡಾರಿ (ಅಖಿಲ ಭಾರತ ತುಳು ಒಕ್ಕೂಟ) – ಸಮಾಜ ಸೇವೆ,ಡಾ. ಇಂದಿರಾ ಹೆಗಡೆ – ಸಾಹಿತ್ಯ 8024
ರಾಜ್ಯದ ಇತರ ಪ್ರಮುಖ ಪುರಸ್ಕೃತರಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಹಿರಿಯ ನಟ ಅಶೋಕ್, ಫ್ಯಾಷನ್ ತಜ್ಞ ಪ್ರಸಾದ್ ಬಿದ್ದಪ್ಪ ಸೇರಿದ್ದಾರೆ. ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.









